ರಾಷ್ಟ್ರ ಸೇವಿಕಾ ಸಮಿತಿಯಿಂದ ವಿಜಯದಶಮಿ ಉತ್ಸವ ಕಾರ್ಯಕ್ರಮ

ಆಪ್ತ ನ್ಯೂಸ್ ಯಲ್ಲಾಪುರ:
ನಮ್ಮ ಭಾವನೆಗಳಿಗೆ, ಕುಟುಂಬದ ಸಂಬಂಧಗಳಿಗೆ ಗೌರವ ಕೊಡುವ ಶಿಷ್ಟಾಚಾರ ನಮ್ಮದಾಗಿದೆ.ಅದನ್ನು ಮುಂದಿನ ಪೀಳಿಗೆಯವರು ಮುಂದುವರೆಸಿಕೊಂಡು ಹೋಗುವಂತೆ ಪ್ರೇರೆಪಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಶಿರಸಿ ವಿಭಾಗ ಗ್ರಾಮ ವಿಕಾಸ ಗತಿವಿಧಿ ಸಂಯೋಜಕ ಗಣಪತಿ ಮೆಣಸುಮನೆ ಹೇಳಿದರು.
ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ರಾಷ್ಟ್ರ ಸೇವಿಕಾ ಸಮಿತಿಯಿಂದ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡುಮಾತನಾಡಿದರು.
ರಾಷ್ಟ್ರೀಯ ಪ್ರಜ್ಞೆ ಬೆಳಸುವಲ್ಲಿ, ಸಾಮಾಜಿಕ ಸಾಮರಸ್ಯ ಕಾಪಾಡುವುದು, ಹೀಗೆ ಹತ್ತು ಹಲವು ಕಾರ್ಯದಲ್ಲಿ ತನ್ನನ್ನು ತಾನು ಸಮರ್ಥವಾಗಿ ಸಮರ್ಪಿಸಿಕೊಳ್ಳುವಲ್ಲಿ ಆರ್‌ಎಸ್ಎಸ್ ಮಂಚೂಣಿಯಲ್ಲಿದೆ. ಸಮಾಜದ ಸಂಕಷ್ಟದ ಸಂದರ್ಭದಲ್ಲಿ ಆರೆಸ್ಸೆಸ್ ತಕ್ಷಣ ನೆರವಾಗುವುದು ಕೂಡಾ ದೇಶಸೇವೆಯ ಪ್ರಜ್ಞೆಯ ಭಾಗವೇ ಆಗಿದೆ ಅದರಲ್ಲಿ ಮಾತೆಯರು ಮಕ್ಕಳು ಸಕ್ರೀಯವಾಗಿ ತೊಡಗಿಕೊಂಡು ಸಂಸ್ಕಾರವನ್ನು ಬಿತ್ತುವ ಕೆಲಸವಾಗಬೇಕು ಎಂದರು.
ದಂತ ವೈದ್ಯೆ ಡಾ.ಜಯಲಕ್ಷ್ಮೀ ಮಾತನಾಡಿ ಸಧೃಡ ಸಮಾಜಕ್ಕೆ ಸಧೃಡ ಕುಟುಂಬ ಅವಶ್ಯಕ. ಸಂಸ್ಕೃತಿ ಯಾವತ್ತು ದಾರಿ ತಪ್ಪಿಸುವದಿಲ್ಲ .ಆದ್ದರಿಂದ ಮಕ್ಕಳನ್ನು ಮೋಬೈಲ ವ್ಯಸನದಿಂದ ದೂರವಿರಿಸಿ ಸಂಸ್ಕಾರಯುತ ನಡೆಯಲ್ಲಿ ಮುನ್ನೆಡೆಸುವಂತೆ ಮಾತೆಯರಿಗೆ ಕರೆ ನೀಡಿದರು.
ಸೌಮ್ಯ ಹೆಗಡೆ ಸ್ವಾಗತಿಸಿದರು. ಸೃಜನಾ ಬಾಗೆವಾಡಿ ವಂದಿಸಿದರು. ನಾಗಶ್ರೀ ಗೀತೆ ಹಾಡಿದರು. ನಗರ ಕಾರ್ಯವಾಹಿಕಾ ಅಪರ್ಣಾ ಘಟ್ಟಿ , ಪ್ರಮುಖರಾದ ಮಮತಾ ಭಟ್ಟ , ಶೈಲಶ್ರೀ ಭಟ್ಟ, ಶಿಕ್ಷಕಿ ಸಂಧ್ಯಾ,ನಮೀತಾ ಬೀಡಿಕರ, ಗಿರಿಜಾ ಮಾವಳ್ಳಿ,ಪ್ರಭಾ ಜಯರಾಜ ,ಆರತಿ ನಾಯ್ಕ ಇತರರು ಇದ್ದರು.
What's Your Reaction?






