ದಾಂಡೇಲಿಗೆ ಭೇಟಿ ನೀಡಿದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಹಾಗೂ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳು

Dec 8, 2025 - 21:48
 0  37
ದಾಂಡೇಲಿಗೆ ಭೇಟಿ ನೀಡಿದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಹಾಗೂ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳು

ಆಪ್ತ ನ್ಯೂಸ್ ದಾಂಡೇಲಿ:

ದೈವಜ್ಞ ಬ್ರಾಹ್ಮಣ ಸಮಾಜದ ಆಶ್ರಯದಡಿ ನಗರದ ದೈವಜ್ಞ ಬ್ರಾಹ್ಮಣ ಸಮಾಜಭವನದಲ್ಲಿ ಆಯೋಜಿಸಲಾಗಿರುವ ದೈವಜ್ಞ ದರ್ಶನ ಕಾರ್ಯಕ್ರಮದ ನಿಮಿತ್ತವಾಗಿ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿಯವರು ಹಾಗೂ ಪರಮಪೂಜ್ಯ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿಯವರು ಸೋಮವಾರ ಸಂಜೆ ದಾಂಡೇಲಿ ನಗರಕ್ಕೆ ಭೇಟಿ ನೀಡಿದರು.

ಪರಮಪೂಜ್ಯ ಸ್ವಾಮೀಜಿಗಳವರನ್ನು ನಗರದ ಪಟೇಲ್ ವೃತ್ತದ ಹತ್ತಿರ ಭಕ್ತಿ ಪೂರ್ವಕವಾಗಿ ದೈವಜ್ಞ ಬ್ರಾಹ್ಮಣ ಸಮಾಜದಿಂದ ಸ್ವಾಗತಿಸಲಾಯಿತು. ಅಲ್ಲಿಂದ ನಗರದ ದೈವಜ್ಞ ಬ್ರಾಹ್ಮಣ ಸಮಾಜಭವನದವರೆಗೆ ಭವ್ಯ ಮೆರವಣಿಗೆಯ ಮೂಲಕ ಪೂಜ್ಯರುಗಳನ್ನು ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0