ಸ್ವಾತಂತ್ರ್ಯ ಹೋರಾಟಗಾರ ಕಾಶೀನಾಥ್ ಮೂಡಿ ಅವರನ್ನು ಕಂಡ ಶಿರಸಿಯ ಗಣ್ಯರು ಏನಂದ್ರು? ಇಲ್ಲಿ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ:
ಸರಳ ಸಹೃದಯಿ, ಸಮಾಜ ಸೇವಕ, ಹಿರಿಯ ಚೇತನ, ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡು, ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಕೈಜೋಡಿಸಿ, ಶಿರಸಿಯ ಏಳಿಗೆಗೆ ಕೊನೆಯ ತನಕ ಶ್ರಮಿಸಿದ ಶಿರಸಿಯ ಹಿರಿಯ ಚೇತನ ಕಾಶಿನಾಥ್ ಮೂಡಿ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ.
ಅವರು ದೀರ್ಘಕಾಲದವರೆಗೆ ಶಿರಸಿಯ ನೆಮ್ಮದಿ ರುದ್ರಭೂಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅದರ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳುವಾಗಿದ್ದ ಇವರು, ಮಾಧವ್ ಸದಾಶಿವ ರಾವ್ ಗೋಲ್ವಾಲಕರ್ (ಗುರೂಜಿ) ಅವರು ಶಿರಸಿಗೆ ಆಗಮಿಸಿದ್ದಾಗ, ತಮ್ಮ ಮನೆಯಲ್ಲೇ ಅವರಿಗೆ ಆಶ್ರಯ ನೀಡಿ, ಗುರೂಜಿಯವರ ಸೇವೆಯನ್ನು ಸಲ್ಲಿಸಿದ ಹೆಗ್ಗಳಿಕೆ ಇವರದು.
ಸ್ವಾತಂತ್ರ್ಯ ಹೋರಾಟಗಾರರಾಗಿ, ರೆಡ್ ಕ್ರಾಸ್‌ನ ಶಿರಸಿ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಅನನ್ಯ. ಯುವಕರಿಗೆ ಸದಾ ಆದರ್ಶಪ್ರಾಯರಾಗಿದ್ದ ಶ್ರೀ ಕಾಶಿನಾಥ್ ಮೂಡಿ ಅವರು, ತಮ್ಮ ಸಾವಿನಲ್ಲೂ ಸಹ ನೇತ್ರದಾನ ಮಾಡಿ ಸಮಾಜಕ್ಕೆ ಪ್ರೇರಣೆಯಾದರು. ಅವರ ಬದುಕು ನಮಗೆಲ್ಲ ಸದಾ ಪ್ರೇರಣಾ ಮೂಲವಾಗಿದೆ.
ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಿ, ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏
~ವಿಶ್ವೇಶ್ವರ ಹೆಗಡೆ ಕಾಗೇರಿ,
ಸಂಸದರು ಉತ್ತರ ಕನ್ನಡ
_______________________
ಆಯುರ್ವೇದ ವೈದ್ಯ ಡಾ. ರವಿಕಿರಣ್ ಪಟವರ್ಧನ್ ಸಂತಾಪ:
ಸ್ವಾತಂತ್ರ್ಯ ಹೋರಾಟಗಾರರು ಕಾಶಿನಾಥ್ ಮೂಡಿಯವರ ನಿಧನ - ಶಿರಸಿಗೆ ಅಪೂರಣೀಯ ನಷ್ಟ
ಶಿರಸಿಯ ವಿದ್ಯಾನಗರ ರುದ್ರಭೂಮಿಯ ಅಧ್ಯಕ್ಷರಾದ ಕಾಶಿನಾಥ್ ಮೂಡಿಯವರ ನಿಧನವು ಶಿರಸಿಯ ಸಮಸ್ತ ನಾಗರಿಕರಿಗೂ ಅಪಾರ ನಷ್ಟವಾಗಿದೆ. ಸಮಾಜಸೇವೆಯ ನಿಜವಾದ ಮೂರ್ತರೂಪವಾಗಿ ಬಾಳಿ ತೋರಿಸಿದವರು.
ಕರ್ನಾಟಕದಾದ್ಯಂತ ಮಾದರಿಯಾದ ರುದ್ರಭೂಮಿ ವಿದ್ಯಾನಗರ ರುದ್ರಭೂಮಿಯನ್ನು ಕಲ್ಪಿಸಿ, ಅದನ್ನು ಶಿಸ್ತು, ಸ್ವಚ್ಛತೆ ಮತ್ತು ಮಾನವೀಯ ಸೇವೆಯ ಕೇಂದ್ರವಾಗಿ ಬೆಳೆಸಿದ ಶ್ರೇಯಸ್ಸು ಸಂಪೂರ್ಣವಾಗಿ ಮೂಡಿಯವರಿಗೆ ಸಲ್ಲುತ್ತದೆ. ಇಂದು ಈ ಸಂಸ್ಥೆ ಕರ್ನಾಟಕದಾದ್ಯಂತ ಮಾದರಿಯಾಗಿ ಪ್ರಸಿದ್ಧವಾಗಿರುವುದು ಅವರ ದೂರದೃಷ್ಟಿ ಮತ್ತು ಅಚಲವಾದ ಸೇವಾಭಾವಕ್ಕೆ ಸಾಕ್ಷಿಯಾಗಿದೆ. ಸಾರ್ವಜನಿಕ ಹಿತಕ್ಕಾಗಿ ಅವರು ನೀಡಿದ ಅವಿರತ ಶ್ರಮವು ಯುಗಯುಗಾಂತರಗಳವರೆಗೆ ಸ್ಮರಣೀಯವಾಗಿ ಉಳಿಯುತ್ತದೆ.
ಐತಿಹಾಸಿಕ ಘಟನೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರೂಜಿ ಗೊಳವಲ್ಕರ್‌ರವರು ಶಿರಸಿಗೆ ಚಿಕಿತ್ಸೆಗಾಗಿ ಆಗಮಿಸಿದಾಗ, ಮೂಡಿಯವರ ಹೊಸಪೇಟೆ ರಸ್ತೆಯ "ರವಿದರ್ಶನ" ಮನೆಯಲ್ಲಿ ವಾಸ್ತವ್ಯ ಹೂಡಿದ್ದು ಶಿರಸಿಯ ಇತಿಹಾಸದಲ್ಲಿ ಒಂದು ಮಹತ್ವದ ಅಧ್ಯಾಯವಾಗಿದೆ. ಇದು ಮೂಡಿಯವರ ವಿಶಾಲ ಹೃದಯ, ಸೇವಾಭಾವ ಮತ್ತು ರಾಷ್ಟ್ರೀಯ ವ್ಯಕ್ತಿತ್ವಗಳೊಂದಿಗಿನ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
ಶಾಶ್ವತ ಪರಂಪರೆ
ಕಾಶಿನಾಥ್ ಮೂಡಿಯವರು ನಿರ್ಮಿಸಿದ ಸಂಸ್ಥೆಗಳು ಮತ್ತು ಸ್ಥಾಪಿಸಿದ ಆದರ್ಶಗಳು ಅವರ ಭೌತಿಕ ಅನುಪಸ್ಥಿತಿಯಲ್ಲೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ಅವರ ಜೀವನ ಪ್ರಯಾಣವು ನಿಸ್ವಾರ್ಥ ಸೇವೆ, ಸಮರ್ಪಣೆ ಮತ್ತು ಸಾಮಾಜಿಕ ಜವಾಬ್ದಾರಿಯ ಸಾಕ್ಷಾತ್ಕಾರವಾಗಿದೆ.
ಅವರ ಪುಣ್ಯಾತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ.
~ಡಾ ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯರು
```````````````````````
ಹಿರಿಯ ಸಾಮಾಜಿಕ ಮುಂದಾಳು, ಸಾಮಾಜಿಕ ಕಳಕಳಿಯ ಸರಳ-ಸಹೃದಯಿಯೂ ಆಗಿದ್ದ ಶಿರಸಿ ನಗರದ ಹಿರಿಯ ಚೇತನ ಕಾಶೀನಾಥ್ ಮೂಡಿ ಅವರು ಇಂದು ನಮ್ಮನ್ನು ಅಗಲಿದ್ದು ಅತೀವ ದುಃಖ ತಂದಿದೆ.
ಮೃತರು ನಮಗೆಲ್ಲ ಸದಾ ಪ್ರೇರಣಾದಾಯಿ ಆಗಿದ್ದು ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಅವರ ಸಮಾಜಮುಖಿ ಕಾರ್ಯ ನಮಗೆ ಸ್ಫೂರ್ತಿದಾಯಕ ವಾಗಿದ್ದು ಅವರ ನೆನಪು ಚಿರಸ್ಮರಣಿಯ..
ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ.
~ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು.
ಬಿಜೆಪಿ ಶಿರಸಿ ನಗರ ಮಂಡಲ.
~``````````````~~~~~~~~~~~~
ಸಂತಾಪ ವ್ಯಕ್ತಪಡಿಸಿದ ಗುರುಪ್ರಸಾದ ಹೆಗಡೆ ಹರ್ತೆಬೈಲ್:
ಸದಾಕಾಲ ಸಾಮಾಜಿಕ ಕಳಕಳಿಯುಳ್ಳವರಾಗಿದ್ದ, ಶಿರಸಿಯ ಒಳಿತಿಗಾಗಿ ತುಡಿದ - ದುಡಿದ ಹಿರಿಯ ಚೇತನ ಕಾಶಿನಾಥ ಮೂಡಿ ಅವರ ನಿಧನದ ಸುದ್ದಿಯಿಂದ ಅತೀವ ದುಃಖವಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘಚಾಲಕರಾದ ಪ.ಪೂ. ಶ್ರೀ ಮಾಧವ ಸದಾಶಿವ ಗೋಲ್ವಾಳ್ಕರ್ (ಗುರೂಜಿ) ಅವರು ಶಿರಸಿಗೆ ಆಗಮಿಸಿದ್ದಾಗ, ಶ್ರೀಯುತ ಕಾಶೀನಾಥ ಮೂಡಿಯವರು ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕಾಶಿನಾಥ್ ಮೂಡಿಯವರು, ತಮ್ಮ ಸತ್ಕಾರ್ಯಗಳಿಂದ ಯಾವತ್ತೂ ಮಾದರಿಯಾಗಿದ್ದವರು. ಇದೀಗ ನೇತ್ರದಾನ ಮಾಡಿ 95 ವರ್ಷಗಳ ತಮ್ಮ ತುಂಬು ಜೀವನದ ನಂತರವೂ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ.
ಅಗಲಿದ ಹಿರಿಯ ಚೇತನ ಕಾಶೀನಾಥ ಮೂಡಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದೂ, ಅವರ ಕುಟುಂಬದವರಿಗೆ ಹಾಗೂ ಒಡನಾಡಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದೂ ಪ್ರಾರ್ಥಿಸುತ್ತೇನೆ.
ಸದ್ಗತಿ, ಓಂ ಶಾಂತಿಃ 🙏
~ಗುರುಪ್ರಸಾದ ಹೆಗಡೆ ಹರ್ತೆಬೈಲ್,
ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಉತ್ತರ ಕನ್ನಡ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



