ಯಕ್ಷಗಾನ ದಶಮಾನೋತ್ಸವ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ: ಪ್ರವೀಣ ಭಟ್ಟ
ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನ ಯರಮುಖದಲ್ಲಿ ಸಪ್ತಸ್ವರ ಸೇವಾ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಯಕ್ಷಗಾನ ದಶಮಾನೋತ್ಸವ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ ಎಂದು ವೇದಮೂರ್ತಿ ಪ್ರವೀಣ ಭಟ್ಟ ಹೇಳಿದರು.
ಅವರು ಯಕ್ಷಗಾನ ದಶಮಾನೋತ್ಸವ ಕಾರ್ಯಕ್ರಮದ ಆರನೇಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಒಂಭತ್ತು ವರ್ಷ ಯಕ್ಷಗಾನ ಸಪ್ತಾಹ ರೂಪದಲ್ಲಿ ನಡೆದು ಈ ವರ್ಷ ದಶಮಾನೋತ್ಸವವಾಗಿ ಆಚರಿಸುತ್ತಿದ್ದಾರೆ. ಜೊತೆಗೆ ಈ ವರ್ಷದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ಮತ್ತು ಯಕ್ಷಗಾನದಲ್ಲಿ ಸಾಧನೆ ಮಾಡಿದ ಹಿರಿಯ ದಿವಂಗತರ ಹೆಸರಿನಲ್ಲಿ ವೇದಿಕೆ ನಿರ್ಮಿಸಿ ಅವರ ಸ್ಮರಣೆಯ ಅವಕಾಶ ನೀಡಿದ್ದಾರೆ. ನಮ್ಮ ಮನೆ ಮಕ್ಕಳು ಯಕ್ಷಗಾನ ರಂಗ ಪ್ರವೇಶ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.
ಶಿಕ್ಷಕಿ ಸುವರ್ಣಾ ಅಭಿಷೇಕ ಮಾತನಾಡಿ ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಗ್ಯಾದರಿಂಗ್, ಬೀದಿ ನಾಟಕ, ಯಕ್ಷಗಾನ, ತಾಳಮದ್ದಳೆಗಳು ಹಳ್ಳಿಗಳಲ್ಲಿ ನಡೆಯುತ್ತಿದ್ದವು. ಆದರೆ ಕಾಲ ಕ್ರಮೇಣ ಕಡಿಮೆ ಆಗುತ್ತಾ ಬಂದರು ಇಂತಹ ಸಪ್ತಾಹ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಕುರಿತು ಪತ್ರಕರ್ತ ತಿಮ್ಮಪ್ಪ ದೇಸಾಯಿ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತ್ರಿವೇಣಿ ಚಂದ್ರಶೇಖರ ಭಾಗ್ವತ್ ರೈತ ಮಹಿಳೆ ಹಾಗೂ ಕೃಷ್ಣಾ ಆಗೇರ ಇಡಗುಂದಿ ಯಕ್ಷಗಾನ ಕ್ಷೇತ್ರ ಸಪ್ತ ಸ್ವರ ಸೇವಾ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಯುವ ಯಕ್ಷಗಾನ ಕಲಾವಿದ ಕೃಷ್ಣಾ ಆಗೇರ ಮಾತನಾಡಿ ಗುಂದ ದಂತಹ ಊರಿನಲ್ಲಿ ನನಗೆ ನೀಡಿದ ಸನ್ಮಾನ ಹೆಮ್ಮೆ ತಂದಿದೆ. ಸಂಸ್ಥೆಯ ವರಿಗೆ ಚಿರಋಣಿ ಎಂದು ಹೇಳಿದರು.
ದಿವಂಗತ ಕಮಲಾಕರ ದೇಸಾಯಿ ವೇದಿಕೆಯಲ್ಲಿ ಯಕ್ಷಭಿಮಾನಿಗಳಾದ ಶಿವಪುರದ ಗೋಪಾಲ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಭಿಮಾನಿಗಳಾದ ವಿಘ್ನೇಶ್ವರ ದೇಸಾಯಿ, ಸದಾಶಿವ ದೇಸಾಯಿ,ಸುಬ್ರಹ್ಮಣ್ಯ ಭಾಗವತ,ಕೃಷ್ಣ ಗಾಂವ್ಕರ, ಭಾಗವತರಾದ ಆನಂದ ಆಗೇರ, ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಲಾಸ್ಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ನಂತರ ಊರಿನ ಚಿಣ್ಣರಿಂದ ರುಕ್ಮಿಣಿ ವಿವಾಹ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



