ಯಾಣ ನೋಡಲು ಹೊರಟವನ ಬೈಕ್ ಸ್ಕಿಡ್: ಸ್ಥಳದಲ್ಲೇ ಪ್ರಾಣ ಬಿಟ್ಟ ವೈದ್ಯಕೀಯ ವಿದ್ಯಾರ್ಥಿ
ಆಪ್ತ ನ್ಯೂಸ್ ಯಲ್ಲಾಪುರ:
ಯಾಣ ನೋಡಲು ಹೋಗಬೇಕಾದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಪ್ರಾಣವನ್ನುಕಳೆದುಕೊಂಡ ಘಟನೆ ಶನಿವಾರ ನಡೆದಿದೆ. ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಹಿಂಬದಿ ಸವಾರನಾದ ವರ್ದನ ವೆಂಕಟೇಶ ಶೆಟ್ಟಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ವೈದ್ಯಕೀಯ ಕಲಿಯುತ್ತಿದ್ದ ಯುವಕರು ಪ್ರವಾಸಿ ತಾಣವಾದ ಯಾಣವನ್ನು ವೀಕ್ಷಿಸಲೆಂದು ಸ್ನೇಹಿತರೊಂದಿಗೆ ಬೈಕ್ ನಲ್ಲಿ ಹುಬ್ಬಳ್ಳಿ ಕಡೆಯಿಂದ ಸಾಗುತ್ತಿದ್ದಾಗ ಈ ಅಪಘಾತ ನಡೆದಿದೆ.ವಿದ್ಯಾರ್ಥಿ ಸಿಂದಗಿಯ ರಾಜೀವ ಭೀಮಾಶಂಕರ ಚೌದರಿ ಎಂಬಾತ ತನ್ನ ಬೈಕಿನ ಹಿಂಬದಿಗೆ ವರ್ಧನ ವೆಂಕಟೇಶ ಎಂಬಾತನನ್ನು ಕೂಡ್ರಿಸಿಕೊಂಡು ಬೈಕ್ ಚಲಾಯಿಸಿಕೊಂಡು ಬರುತ್ತಿರುವಾಗ ರಾ.ಹೆದ್ದಾರಿ ತಾಲೂಕಿನ ಕಣ್ಣಿಗೇರಿ ಗ್ರಾಮದ ಇಟ್ಟಿಗೆ ತಯಾರಿಕಾ ಘಟಕದ ಸಮೀಪದ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿತ್ತು.ಬೈಕ್ ರಸ್ತೆಗೆ ಬಿದ್ದ ರಭಸಕ್ಕೆ ಬೈಕ್ ಹಿಂಬದಿ ಕುಳಿತಿದ್ದ ಯಾದಗಿರಿಯ ವರ್ಧನ ವೆಂಕಟೇಶ (19 ವರ್ಷ) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಸವಾರನಿಗೂ ಗಂಭೀರವಾದ ಗಾಯವಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
2
Wow
0



