ಆಪ್ತ ನ್ಯೂಸ್ ಯಲ್ಲಾಪುರ:
ಇಲ್ಲಿಯ ವೈಟಿಎಸ್ಸೆಸ್ ನ ಮಾಜಿ ವಿದ್ಯಾರ್ಥಿ ಹಾಗೂ ವಿಶ್ವದರ್ಶನ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಹಾಗೂ ಪ್ರಸ್ತುತ ಮಂಗಳೂರಿನ ಲೀಲಾವತಿ ಶೆಟ್ಟಿ ಕಾಲೇಜ್ ಆಫ್ ಎಜ್ಯುಕೇಶನ್ ( ಡಾ. ಎಮ್. ವಿ. ಶೆಟ್ಟಿ ಸಂಸ್ಠೆಯ ಅಂಗಸಂಸ್ಠೆ) ಉಪನ್ಯಾಸಕಿ ಮೂಲತಃ ಯಲ್ಲಾಪುರದ ಮಾಲತಿ ಆರ್. ಭಾವಿಮನೆ ಅವರು ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ
ಅವರು ಶ್ರೀನಿವಾಸ ಶಿಕ್ಷಣ ವಿಶ್ವವಿದ್ಯಾಲಯದ ಡಾ. ವಿಜಯಲಕ್ಷ್ಮಿ ನಾಯಕ ರವರ ಮಾರ್ಗದರ್ಶನದಲ್ಲಿ “ಮಂಗಳೂರು ತಾಲೂಕಿನ ಪ್ರೌಢಶಾಲಾ ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾ ಆಯ್ದ ಬರವಣಿಗೆ ಸಾಮರ್ಥ್ಯ, ಸಾಮಾಜಿಕ ಕೌಶಲ ಮತ್ತು ಪ್ರತಿಫಲಿತ ಚಿಂತನ ಮಟ್ಟವನ್ನು ಬೆಳೆಸುವಲ್ಲಿ ಸಹವರ್ತಿ ಸಂಭಾಷಣಾ ಉಪಕ್ರಮದ (Collaborative Dialogue Approach) ಪರಿಣಾಮದ ಕುರಿತು ಒಂದು ಅಧ್ಯಯನ” ಎಂಬ ವಿಷಯವಾಗಿ ಪ್ರಬಂಧ ಮಂಡಿಸಿದ್ದರು. ಮಾಲತಿಯವರು ಯಲ್ಲಾಪುರದ ರಾಮಕೃಷ್ಣ ಭಾವಿಮನೆ ಮತ್ತು ಮಹಾದೇವಿ ದಂಪತಿಯ ಪುತ್ರಿ. ರಾಮಕೃಷ್ಣ ಭಟ್ಟ್ ಅವರ ಪತ್ನಿ.