ಮಿರ್ಜಾನ್‌ನಲ್ಲಿ ಯುವಕ ನೇಣಿಗೆ ಶರಣು

Oct 16, 2025 - 13:19
 0  155
ಮಿರ್ಜಾನ್‌ನಲ್ಲಿ ಯುವಕ ನೇಣಿಗೆ ಶರಣು

ಆಪ್ತ ನ್ಯೂಸ್ ಕುಮಟಾ:

ಹೊನ್ನಾವರ ತಾಲೂಕಿನ ಮಂಕಿ ಮೂಲದ ಯುವಕನೊಬ್ಬ ಮಿರ್ಜಾನ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಿರ್ಜಾನ್ ದರ್ಗಾ ದ ಗೂಡಂಗಡಿ ಬಳಿ ಇಂದು ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಮಂಕಿ ಮೂಲದ ವಿನಾಯಕ ನಾಯ್ಕ ಎಂದು ಗುರುತಿಸಲಾಗಿದೆ. 
ಪೊಲೀಸ್ ಮೂಲಗಳ ಪ್ರಕಾರ, ವಿನಾಯಕ  ಮಿರ್ಜಾನ್ ದರ್ಗಾ ಹತ್ತಿರದ ರಸ್ತೆ ಪಕ್ಕದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿನಾಯಕ ನಾಯ್ಕ ಮಿರ್ಜಾನ್ ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ಹದಿನೈದು ದಿನಗಳಿಂದ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಶವವನ್ನು‌ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕುಮಟಾ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1