ಆಪ್ತ ನ್ಯೂಸ್ ಶಿರಸಿ:
ಭಾರತೀಯ ಅಂಚೆ ಇಲಾಖೆ, ಅಂಚೆ ಅಧೀಕ್ಷಕರು, ಶಿರಸಿ ವಿಭಾಗ, ಶಿರಸಿ ಇವರಿಂದ ಶಿರಸಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗಡೆಕಟ್ಟಾದಲ್ಲಿ ನವೆಂಬರ್ ೧೭ರ ಸೋಮವಾರ ಮತ್ತು ನವೆಂಬರ್ ೧೮ರ ಮಂಗಳವಾರ ದಿನಗಳಂದು ಆಧಾರ ತಿದ್ದುಪಡಿ ನೋಂದಣಿ ಮೇಳ ನಡೆಯಲಿದೆ.
ಜನ್ಮ ದಿನಾಂಕ ಬದಲಾವಣೆ, ಹೆಸರು ಬದಲಾವಣೆ, ವಿಳಾಸ ಬದಲಾವಣೆ ಹಾಗೂ ಮಕ್ಕಳಿಗೆ ಆಧಾರ ಕಾರ್ಡ ಮಾಡಿಕೊಡಲಾಗುವುದು. ಆದ್ದರಿಂದ ಹೆಗಡೆಕಟ್ಟಾ, ದೇವನಳ್ಳಿ ಹಾಗೂ ಹುಣಸೇಕೊಪ್ಪ ಕ್ಲಸ್ಟರಿನ ಎಲ್ಲಾ ಶಾಲೆಯ ಮಕ್ಕಳು ಹಾಗೂ ಸುತ್ತಮುತ್ತಲಿನ ನಾಗರಿಕರು, ಪಾಲಕರು, ಪೋಷಕರು ಈ ಕಾರ್ಯಕ್ರಮದಲ್ಲಿ ಆಧಾರ ತಿದ್ದುಪಡಿ ಹಾಗೂ ನೊಂದಣಿ ಮಾಡಿಕೊಳ್ಳಲು ಸವಿನಯ ವಿನಂತಿ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಸತೀಶ ಹೆಗಡೆ, ಮುಖ್ಯಾಧ್ಯಾಪಕರು, ಹಿರಿಯ ಪ್ರಾಥಮಿಕ ಶಾಲೆ ಹೆಗಡೆಕಟ್ಟಾ. ಮೋ: ೯೪೪೯೧೧೧೫೧೩