ಅಘನಾಶಿನಿ ನದಿ ಜೋಡಣೆ ಮತ್ತು ಅರಣ್ಯವಾಸಿಗಳಿಂದ ಚಿಂತನೆ ಸಭೆ
ಆಪ್ತ ನ್ಯೂಸ್ ಸಿದ್ದಾಪುರ:
ಅಘನಾಶಿನಿ ನದಿ ಜೋಡಣೆ ಯೋಜನೆ ಕುರಿತು ಮತ್ತು ಅರಣ್ಯವಾಸಿಗಳಿಂದ ಚಿಂತನ ಸಭೆಯನ್ನು ಜ.೧೮, ರವಿವಾರ ಮುಂಜಾನೆ ೧೦ ಗಂಟೆಗೆ ಸ್ಥಳೀಯ ರಾಘವೇಂದ್ರ ಮಠ ಸಭಾ ಮಂಟಪದಲ್ಲಿ ಕರಿಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ತಿಳಿಸಿದ್ದಾರೆ.
ಪರಿಸರ ವಿರೋಧಿ ಮತ್ತು ಜಿಲ್ಲೆಯ ಯೋಜನೆಗಳಲ್ಲೊಂದಾದ ಅಘನಾಶಿನಿ ಜಲ ವಿದ್ಯತ್ ಯೋಜನೆಯಿಂದ ಅಘನಾಶಿನಿ ನದಿಯಿಂದ ಹರಿಯುವ ನೀರನ್ನು ಸಾಗರ, ಶಿವಮೊಗ್ಗ, ತರಿಕೇರಿ ಮೂಲಕ ವಾಣಿ ವಿಲಾಸ ಜಲಾಶಕ್ಕೆ ಒಯ್ಯೂವ ಮೂಲಕ ಜಿಲ್ಲೆಗೆ ಆಗುವ ದುಷ್ಪರಿಣಾಮ ಕುರಿತು ಹಾಗೂ ಅರಣ್ಯವಾಸಿಗಳಿಗೆ ಉಂಟಾಗುವ ಅಭದ್ರತೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿಂತನ ಸಭೆಯು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆ ವಹಿಸುವರು. ಅದ್ಯಕ್ಷತೆಯಲ್ಲಿ ಜರುಗುವ ಸಭೆಯಲ್ಲಿ ಆಸಕ್ತರು ಆಗಮಿಸಲು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



