ಉಮ್ಮಚಗಿ ಶಾಲೆಗೆ ಶುದ್ಧ ನೀರಿನ ಘಟಕ ದೇಣಿಗೆ ನೀಡಿದ ಅನಂತಮೂರ್ತಿ ಹೆಗಡೆ

Nov 16, 2025 - 19:30
 0  21
ಉಮ್ಮಚಗಿ ಶಾಲೆಗೆ  ಶುದ್ಧ ನೀರಿನ ಘಟಕ  ದೇಣಿಗೆ ನೀಡಿದ ಅನಂತಮೂರ್ತಿ ಹೆಗಡೆ

ಆಪ್ತ ನ್ಯೂಸ್‌ ಯಲ್ಲಾಪುರ:


ಅವಕಾಶ ಸಿಕ್ಕಾಗೆಲ್ಲಾ ಇತರರಿಗೆ ಸಹಾಯ ಮಾಡಬೇಕು. ಅಪಾರ ಹಣ ಇರುವವನು ಶ್ರೀಮಂತನಲ್ಲ ತನ್ನಲ್ಲಿ ಇರುವುದರ ಕುರಿತು ತೃಪ್ತಿ ಇರುವವನು ನಿಜವಾದ ಶ್ರೀಮಂತ. ತನ್ನ ಬಳಿ ಇರುವುದರಲ್ಲಿಯೇ ಒಂದಷ್ಟನ್ನು ಸಮಾಜಕ್ಕೆಂದು ಮೀಸಲಿಡಬೇಕು. ಅಗತ್ಯ ಇರುವವರಿಗೆ ದಾನ ಮಾಡುವುದರಿಂದ ನಮಗೆ ಪುಣ್ಯ ಲಭಿಸುತ್ತದೆ ಎಂದು ಅನಂತಮೂರ್ತಿ ಹೆಗಡೆ  ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ  ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ಉಮ್ಮಚಗಿ  ಹಿರಿಯ ಪ್ರಾಥಮಿಕ ಶಾಲೆಗೆ ಅನಂತಮೂರ್ತಿ ಹೆಗಡೆ  ಚಾರಿಟೇಬಲ್ ಟ್ರಸ್ಟ್ ವತಿಯಿಂದ  ದೇಣಿಗೆ ನೀಡಿದ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಉಸಿರು ನಿಂತಮೇಲೂ ನಮ್ಮ ಹೆಸರು ಉಳಿಯ ಬೇಕೆಂದರೆ ದಾನವನ್ನು ಮಾಡಬೇಕು. ನನಗೆ ದಾನ ಹಾಗೂ ಸಮಾಜ ಸೇವೆಗೆ ಡಾ. ಪುನೀತ್ ರಾಜ್ ಕುಮಾರ್ ಪ್ರೇರಣೆಯಾಗಿದ್ದಾರೆ. ಸಮಾಜಕ್ಕೆ ನನ್ನ ಕೈಲಾದಷ್ಟು ಸಹಾಯವನ್ನು ಮಾಡಲು ನಾನು ಸದಾ ಸಿದ್ಧನಿದ್ದೇನೆ. ಈ ಶಾಲೆಗೆ ವಾಟರ್ ಫಿಲ್ಟರ್ ಅಗತ್ಯತೆ ಕುರಿತು ನನಗೆ ತಿಳಿಸಿದಂತಹ ಗಣೇಶ್  ಹೆಗಡೆ ಅವರಿಗೆ   ನಾನು ಈ ಸಂಧರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.
     
ಸ್ಥಳೀಯ ಮುಖಂಡರಾದ  ಗಣೇಶ್ ಹೆಗಡೆ, ಸ್ಥಳೀಯ SDMC ಅಧ್ಯಕ್ಷರು ಹಲವಾರು ಗಣ್ಯರು ಉಪಸ್ಥಿತರಿದ್ದರು. 

ಬಳಿಕ ಅನಂತಮೂರ್ತಿ ಹೆಗಡೆ ಉಮ್ಮಚಗಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪೋಷಕ ಶಿಕ್ಷಕರ ಮಹಾಸಭೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0