ಆಪ್ತ ನ್ಯೂಸ್ ಶಿರಸಿ:
ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯು ಶಿರಸಿಯ ಹೊಟೆಲ್ ಸಾಮ್ರಾಟ್ ವಿನಾಯಕ ಹಾಲ್ ನಲ್ಲಿ ಜರುಗಿತು.
ಸಭೆಯಲ್ಲಿ ನವೀಕೃತ ಏಳು ಹೊಸ ಸದಸ್ಯರುಗಳನ್ನು ನಾಮಕರಣ ಮಾಡಲಾಗಿ ಜಿಲ್ಲೆಯ ಪ್ರಸ್ತುತ ಚದುರಂಗ ಕಾರ್ಯಚಟುವಟಿಕೆಯ ಬಗ್ಗೆ ಚರ್ಚಿಸಿ, ಅಭಿವೃದ್ಧಿಯತ್ತ ಕೊಂಡೊಯ್ಯುವ ವಿಷಯ ಆಲೋಚನೆಯನ್ನು ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾದ ರಾಮಚಂದ್ರ ಭಟ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ಐದು ಹೊಸದಾದ ಅಂತಾರಾಷ್ಟ್ರೀಯ ತೀರ್ಪುಗಾರರ ಬಗ್ಗೆ ಆಯ್ಕೆ ಪ್ರಕ್ರಿಯೆ ಕೈಗೊಂಡಿದ್ದನ್ನು ವಿವರಿಸಿದರು.
ಜಿಲ್ಲಾ ಚದುರಂಗ ಚಾಂಪಿಯನ್ ಶಿಪ್‌ಗಳ ವಿವರಗಳನ್ನು ಸದಸ್ಯರಿಗೆ ವಿವರಿಸಲಾಯಿತು. ಪ್ರಸಕ್ತ ಸಾಲಿನ ಆಯವ್ಯಯದ ವಿವರಗಳನ್ನು ನೀಡಿದರು. ಹೀಗೆ ಹತ್ತು ಹಲವಾರು ಚದುರಂಗ ಅಭಿವೃದ್ಧಿಯ ವಿಷಯಗಳನ್ನು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.
ಜಿಲ್ಲೆಯಲ್ಲಿ ಚದುರಂಗ ಪಂದ್ಯಾವಳಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲು ಪ್ರೋತ್ಸಾಹ ನೀಡಿ ಜಿಲ್ಲಾ ನೊಂದಣಿ ಶುಲ್ಕ ರೂ ೫೦೦/- ನ್ನು ನಿಗದಿ ಪಡಿಸಲಾಯಿತಿ. ಆಟಗಾರರಿಗೆ ವಾರ್ಷಿಕ ರೂ.೭೫/- ಅನ್ನು ನೊಂದಣಿ ಶುಲ್ಕವೆಂದು ಪಡೆಯಲಾಯಿತು. ಜಿಲ್ಲೆಯಲ್ಲಿ ಚದುರಂಗ ಕೇಂದ್ರ ಕಾರ್ಯಾಲಯವನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ನವೀನ ಹೆಗಡೆ ಸಭೆಯ ಕಾರ್ಯಸೂಚಿಯನ್ನು ವಿವರಿಸಿದರು.