ಶಿರಸಿಯಲ್ಲಿ ಅಂತರಂಗದಾಮೃದಂಗ ಕೃತಿ ಪರಿಚಯ

Oct 21, 2025 - 20:08
 0  14
ಶಿರಸಿಯಲ್ಲಿ ಅಂತರಂಗದಾಮೃದಂಗ ಕೃತಿ ಪರಿಚಯ

ಆಪ್ತ ನ್ಯೂಸ್ ಶಿರಸಿ:

ನಯನಾ ಫೌಂಡೇಶನ್ ಶಿರಸಿ, ಶ್ರೀ ಎಮ್.ಎಮ್ ಜೋಶಿ ಗಣೇಶ ನೇತ್ರಾಲಯ ಹಾಗೂ ಗಾಯತ್ರಿ ಗೆಳೆಯರ ಬಳಗ ಶಿರಸಿ ಇವರ ಸಹಯೋಗದೊಂದಿಗೆ ನವೆಂಬರ್ 01ರಂದು ಶನಿವಾರ ಅಪರಾಹ್ನ 3:00 ಗಂಟೆಗೆ ಗಣೇಶ ನೇತ್ರಾಲಯ ನಯನ ಸಭಾಂಗಣ, ದೇವಿಕೆರೆ ರಸ್ತೆ ಶಿರಸಿ ಇಲ್ಲಿ ಪುಸ್ತಕಾವಲೋಕನ ಮತ್ತು ನಾಡ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ,
ರಮೇಶ ಹೆಗಡೆ ಕೆರೆಕೋಣ, ಶಿಕ್ಷಕರು, ತೆರಕನಹಳ್ಳಿ ಇವರ ಕೃತಿ – ಅಂತರಂಗದಾಮೃದಂಗ (ಕವನ ಸಂಕಲನ) ಈ ಕೃತಿಯನ್ನು ಭವ್ಯಾ ಹೆಗಡೆ ಹಳೆಯೂರು, ಉಪನ್ಯಾಸಕಿ ಮಾರಿಕಾಂಬಾ ಪದವಿ ಪೂರ್ವ ಕಾಲೇಜ್, ಶಿರಸಿ ಇವರು ಪರಿಚಯಿಸಲಿದ್ದಾರೆ. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಜಿ.ಎ ಹೆಗಡೆ ಸೋಂದಾ, ನಿವೃತ್ತ ಡೀನ್ ಹಾಗೂ ಯಕ್ಷಗಾನ ವಿದ್ವಾಂಸರು ಮತ್ತು ಅಂಕಣಕಾರರು ಇವರು ವಹಿಸಲಿದ್ದಾರೆ.
ಅತಿಥಿಗಳಾಗಿ ಭಾಗೀರಥಿ ಹೆಗಡೆ ಪ್ರಸಿದ್ಧ ಲೇಖಕಿ ಹಾಗೂ ಕಥೆಗಾರ್ತಿ ಹಾಗೂ ಡಾ| ಜಿ.ಎಸ್ ಹೆಗಡೆ ಪ್ರಾಚಾರ್ಯರು, ಅಳ್ಳಂಕಿ ಪದವಿಪೂರ್ವ ಕಾಲೇಜ್, ಹೊನ್ನಾವರ ಇವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಡಾ|| ಶಿವರಾಮ ಕೆ.ವಿ. ಖ್ಯಾತ ನೇತ್ರ ತಜ್ಞರು, ರವಿ ಹೆಗಡೆ ಗಡೀಹಳ್ಳಿ  ಹಿರಿಯ ಸಮಾಜ ಸೇವಕರು, ಹಾಗೂ ಜಯಪ್ರಕಾಶ ಹಬ್ಬು ಖ್ಯಾತ ಲೇಖಕರು, ಹಾಗೂ ಕವಿಗಳು  ಇವರ ಗೌರವ ಉಪಸ್ಥಿತಿ ಇರಲಿದೆ. ಈ ಕಾರ್ಯಕ್ರಮ ನಿರ್ವಹಣೆಯನ್ನು ವಿಜಯಾ ಶಾನಭಾಗ  (ಶಿಕ್ಷಕಿ) ಇವರು ನಡೆಸಿಕೊಡಲಿದ್ದಾರೆ. 
ನಾಡಭಕ್ತಿಗೀತೆಗಳ ಗಾಯನದಲ್ಲಿ ಭಾಗವಹಿಸುವವರು ಅಕ್ಟೊಬರ್ 28ರ ಒಳಗೆ ಈ ಕೆಳಗಿನ ಸಂಪರ್ಕ ಸಂಖ್ಯೆಗೆ ಹೆಸರು ನೋಂದಾಯಿಸಲು ತಿಳಿಸಲಾಗಿದೆ. ಮೋ: ೭೩೪೯೦೪೮೪೪೧ ಅಥವಾ ೯೪೮೧೪೬೧೪೫೨

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0