ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿ

Nov 6, 2025 - 21:43
 0  10
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿ
ಆಪ್ತ ನ್ಯೂಸ್‌ ಶಿರಸಿ

GvÀÛgÀ PÀ£ÀßqÀ DAiÀÄðFrUÀ, £ÁªÀÄzsÁj ©®èªÀ £ËPÀgÀgÀ PÉëêÀiÁ©üªÀÈ¢Þ ¸ÀAWÀ (j)ವು ೨೦೨೪-೨೫ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ನವೆಂಬರ್‌ ೨೩ರಂದು ರವಿವಾರ ಟಿ.ಎಂ. ಎಸ್. ಸಭಾ ಭವನ ಶಿರಸಿಯಲ್ಲಿ ಪೂರ್ವಾಹ್ನ ೯.೩೦ಕ್ಕೆ ಹಮ್ಮಿಕೊಂಡಿದೆ.

೨೦೨೪-೨೫ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸ್. ಎಸ್. ಎಲ್.ಸಿ.  ಪರೀಕ್ಷೆಯಲ್ಲಿ ೯೫% ಕ್ಕಿಂತ ಹೆಚ್ಚು ಅಂಕ ಪಡೆದ ೩ ವಿದ್ಯಾರ್ಥಿಗಳನ್ನು ಹಾಗೂ ಪಿ.ಯು.ಸಿ.ಯಲ್ಲಿ ೯೦% ಕ್ಕಿಂತ ಹೆಚ್ಚು ಅಂಕ ಪಡೆದ (ಕಲಾ, ವಾಣಿಜ್ಯ ವಿಜ್ಞಾನ ಪ್ರತ್ಯೇಕವಾಗಿ) ತಲಾ ೩ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. 

ಅದೇ ರೀತಿ ತಾಲೂಕು ವಿಭಾಗದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ೯೫% ಕ್ಕಿಂತ ಹೆಚ್ಚು ಅಂಕ ಪಡೆದ ೩ ವಿದ್ಯಾರ್ಥಿಗಳನ್ನು  ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ೩ ವಿಭಾಗಗಳಲ್ಲಿ ೯೦% ಕ್ಕಿಂತ ಹೆಚ್ಚು ಅಂಕ ಪಡೆದ  ತಲಾ ೩ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಹಾಗೂ ಆರ್ಥಿಕವಾಗಿ ಹಿಂದುಳಿದ ೧೦ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು.  ಆಯ್ಕೆಯಾದ  ವಿದ್ಯಾರ್ಥಿಗಳು ಕಾರ್ಯಕ್ರಮದ  ದಿನ ಹಾಜರಿದ್ದು  ಪ್ರೋತ್ಸಾಹಧನ ಪಡೆದುಕೊಳ್ಳುವುದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸಲಾಗುವುದು. 
೨೦೨೪-೨೫ ನೇ ಸಾಲಿನಲ್ಲಿ ಅಕ್ಟೋಬರ್ ೩೧ ರೊಳಗೆ  ನಿವೃತ್ತರಾದ ಸಂಘದ ಸದಸ್ಯರಿಗೆ ಹಾಗೂ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಇಟ್ಟುಕೊಳ್ಳಲಾಗಿದೆ.  ರಾಜ್ಯ/ರಾಷ್ಟçಮಟ್ಟದಲ್ಲಿ  ಯಾವುದಾದರೂ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು ಇದ್ದರೆ ಮಾಹಿತಿಯನ್ನು ನೀಡುವುದು. 
ಎಸ್.ಎಸ್. ಎಲ್.ಸಿ. ಪಿಯುಸಿ ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿಯನ್ನು ದಿನಾಂಕ: ೧೬-೧೧-೨೦೨೫ ರೊಳಗೆ ಸಲ್ಲಿಸುವುದು. 

ಅರ್ಜಿ ಸಲ್ಲಿಸಲು 
ಸಂಪರ್ಕಿಸಬೇಕಾದ ವಿಳಾಸ
ನಾಗರಾಜ ನಾಯ್ಕ  ೯೦೦೮೬೯೬೯೫೭
ಎಂ.ಎಸ್. ನಾಯ್ಕ ೯೪೪೯೦೫೦೨೬೦
ಜೆ.ಪಿ. ನಾಯ್ಕ ೯೨೪೨೧೧೫೯೬೬
ಜಿ.ಎಚ್. ನಾಯ್ಕ ೯೪೪೯೫೮೭೫೬೪
ವಿ.ಆರ್. ನಾಯ್ಕ ೯೪೮೨೧೯೧೮೭೬
ಜಿ. ವಿ. ನಾಯ್ಕ ೮೬೬೦೫೪೬೯೧೨

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0