ಬಿರುಗಾಳಿ ಮಳೆಗೆ ಮುರಿದು ಬಿತ್ತು ಅಡಿಕೆ ಗಿಡಗಳು
ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನಲ್ಲಿ ಬೀಳುತ್ತಿರುವ ಬಿರುಗಾಳಿ ಮಳೆಗೆ ರೈತರು ಸಂಕಷ್ಟ ಅನುಭವಿಸುವಂತಾಗಿದ್ದು, ದಬಗಾರದ ಸುಬ್ರಾಯ ಎನ್ ದಬಗಾರ ಅವರ ಇಪ್ಪತ್ತಕ್ಕೂ ಹೆಚ್ಚು ಅಡಿಕೆ ಮರಗಳು ಮತ್ತು ನಾಲ್ಕೈದು ಅಡಿಕೆ ಸಸಿಗಳು ಭಾರಿ ಬಿರುಗಾಳಿ ಮಳೆಗೆ ಮುರಿದು ಬಿದ್ದಿವೆ.
ಎಲ್ಲ ಅಡಿಕೆ ಮರಗಳು ಪಲಕೊಡುವ ಮರಗಳಾಗಿದ್ದು, ಬೆಳೆದ ಮತ್ತು ಎಳೆಯ ಅಡಿಕೆಯನ್ನು ಹೊಂದಿವೆ. ಹಬ್ಬಗಳ ನಡುವೆ ಅಡಿಕೆ ಮರಗಳು ಬಿದ್ದಿದ್ದು ಅಡಿಕೆಯನ್ನು ಬಿಡಿಸಲು ಕೂಡ ಆಳುಗಳ ಕೊರತೆಯಾಗಿದೆ ಎನ್ನುತ್ತಿದ್ದಾರೆ ಸುಬ್ರಾಯ ಅವರು.
ಕಳೆದ ನಾಲ್ಕು ದಿನಗಳಿಂದ ಬೀಳುತ್ತಿದ್ದ ಅಕಾಲಿಕ ಮಳೆಯಿಂದ ಹಲವಾರು ರೈತರ ಅಡಿಕೆ ಮರಗಳು ಮುರಿದು, ಕಿತ್ತು ಬಿದ್ದಿವೆ. ಸಾಯಂಕಾಲ ಆಗುತ್ತಿದ್ದಂತೆ ಗುಡುಗು ಮಿಂಚು ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಇಂತ ಅಕಾಲಿಕ ಮಳೆಗಳಿಂದ ರೈತರು ಹೈರಾಣಾಗಿದ್ದಾರೆ. ಬೇಕಾದಾಗ ಬೀಳದ ಮಳೆ ಬೆಳೆ ಕೈಗೆ ಬರುವ ವೇಳೆ ಬೆಳೆ ಹಾಳುಮಾಡುತ್ತಿದೆ. ಈಗ ಮುಂದೆ ಭತ್ತದ ಕೊಯ್ಲು ಆರಂಭವಾಗುವ ಸಮಯ. ಭತ್ತ ಕಾಳು ಕಟ್ಟಿ ಹಣ್ಣಾಗಬೇಕು. ಆದರೆ ಇಂತ ಮಳೆಯಿಂದ ಬೆಳೆಯೆಲ್ಲಾ ಅಡ್ಡ ಬಿದ್ದು ಕಾಳು ಹಣ್ಣು ಆಗುವ ಮೊದಲೇ ಹಾಳಾಗುತ್ತದೆ. ಬಿದ್ದ ಬೆಳೆಯನ್ನು ಕಾಡುಪ್ರಾಣಿಗಳು ತುಳಿದು ಹಾಳುಮಾಡುತ್ತವೆ ಎಂದು ರೈತರು ತಮ್ಮ ಕಷ್ಟ ತೋಡಿಕೊಳ್ಳುತ್ತಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



