ಈ ಮಳೆಗೆ ಅರ್ನಬ್ ಕಾರಣ!
ಅಚ್ಚರಿ ಎನಿಸಿದರೂ ಇದು ಸತ್ಯ… ಉತ್ತರ ಕನ್ನಡದ ಮಳೆಯ ಹಿಂದೆ ಇರೋದು ಬಾಂಗ್ಲಾದೇಶ ಮೂಲದ ಅರ್ನಬ್!!
ಆಪ್ತ ನ್ಯೂಸ್ ಹುಬ್ಬಳ್ಳಿ:
ನಿನ್ನೆ ರಾತ್ರಿಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಕೆಲವೊಮ್ಮೆ ಬಿರುಸಾಗಿ ಸುರಿಯುತ್ತಿರುವ ಮಳೆ, ಇನ್ನು ಕೆಲ ಹೊತ್ತು ಜಿಟಿಜಿಟಿಯಾಗಿ ಕಾಡುತ್ತಿದೆ. ಚೌತಿ ಸಂದರ್ಭದಲ್ಲಿ ಮಳೆಯಿಲ್ಲದೆ ಹೈರಾಣಾಗಿದ್ದ ಜನರಿಗೆ ಇದೀಗ ಒಂದೇ ಸಮನೆ ಸುರಿಯುತ್ತಿರುವ ಮಳೆ ಒಂದೆಡೆ ಖುಷಿ ತಂದಿದ್ದರೆ, ಮತ್ತೊಂದೆಡೆ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯನ್ನೂ ಉಂಟು ಮಾಡುತ್ತಿದೆ.
ಆದರೆ…
“ಈ ಮಳೆಗೆ ಅರ್ನಬ್ ಕಾರಣ” ಎಂದರೆ ನೀವು ನಂಬುತ್ತೀರಾ?
ಅರ್ನಬ್ ಯಾರು?
ಉತ್ತರ ಕರ್ನಾಟಕದ ಮಳೆಯಿಗೂ ಅರ್ನಬ್ಗೂ ಏನು ಸಂಬಂಧ?
ಅರ್ನಬ್ ಎಂಬ ವ್ಯಕ್ತಿ ಮಳೆಯನ್ನು ಸುರಿಸುತ್ತಿದ್ದಾನಾ?
ಇಲ್ಲ… ಅರ್ನಬ್ ವ್ಯಕ್ತಿಯಲ್ಲ!
ಅದು ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತ. 🌪️
ಹಾಗಾದರೆ ಅರ್ನಬ್ಗೂ ಉತ್ತರ ಕನ್ನಡದ ಮಳೆಯಿಗೂ ಸಂಬಂಧವೇನು?
ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅರ್ನಬ್’ ಚಂಡಮಾರುತ ಆಂಧ್ರಪ್ರದೇಶ–ಒಡಿಶಾ ಕರಾವಳಿ ಭಾಗದತ್ತ ಸಾಗುತ್ತಿದ್ದು, ಇದರ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿದೆ.
ಚಂಡಮಾರುತದ ಪ್ರಭಾವದಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ, ಮೋಡಗಳ ರಚನೆ ಹಾಗೂ ಮಳೆಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಪರಿಣಾಮವಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಕಾಣಿಸಿಕೊಂಡಿದೆ.
ವಿಶೇಷವಾಗಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದ್ದು, ಉತ್ತರ ಕರ್ನಾಟಕದಲ್ಲಿಯೂ ಮಳೆಯ ವಾತಾವರಣ ಮುಂದುವರಿದಿದೆ.
‘ಅರ್ನಬ್’ ಎಂಬ ಹೆಸರೇಕೆ?
ಇನ್ನು ಈ ಚಂಡಮಾರುತಕ್ಕೆ ‘ಅರ್ನಬ್’ ಎಂಬ ಹೆಸರಿಟ್ಟಿರುವುದೂ ಕುತೂಹಲಕಾರಿ ಸಂಗತಿ.
ಈ ಹೆಸರನ್ನು ಬಾಂಗ್ಲಾದೇಶ ಸೂಚಿಸಿದೆ ಎನ್ನಲಾಗಿದ್ದು, ‘ಅರ್ನಬ್’ ಎಂಬ ಪದಕ್ಕೆ ಸಮುದ್ರ ಎಂಬ ಅರ್ಥವಿದೆ ಎಂದು ಹೇಳಲಾಗುತ್ತದೆ.
ಹೀಗಾಗಿ…
ಅರ್ನಬ್ ಎಂದರೆ ವ್ಯಕ್ತಿಯಲ್ಲ, ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಚಂಡಮಾರುತ!
ಅದರ ಪ್ರಭಾವದಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ವಾತಾವರಣ ನಿರ್ಮಾಣವಾಗಿದ್ದು, ಉತ್ತರ ಕನ್ನಡದಲ್ಲಿಯೂ ಮಳೆ ಮುಂದುವರಿದಿದೆ.
ಈಗ ಗೊತ್ತಾಯ್ತಾ… ಈ ಮಳೆಗೆ ‘ಅರ್ನಬ್’ ಹೇಗೆ ಕಾರಣ ಅಂತ? 🌧️🌪️
ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಜನರು ಹವಾಮಾನ ಇಲಾಖೆ ನೀಡುವ ಮುನ್ನೆಚ್ಚರಿಕೆ ಹಾಗೂ ಸ್ಥಳೀಯ ಆಡಳಿತದ ಸೂಚನೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0