ಆತ 800 ರೂ ಬಾಕಿ ಕೇಳಿದ: ಈತ ಬಾಟಲಿಯಲ್ಲಿ ಹೊಡೆದ
ಆಪ್ತ ನ್ಯೂಸ್ ಶಿರಸಿ:
ಉದ್ರಿ ಮಾಡಿದ ಬಾಕಿ ಹಣ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಬಿಸಲಕೊಪ್ಪದಲ್ಲಿ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಬಿಸಲಕೊಪ್ಪದ ಚಂದ್ರು ಗಣಪತಿ ಪೂಜಾರಿ ಇವರು ಬಿಸಲುಕೊಪ್ಪ ಪೇಟೆಯಲ್ಲಿ ಅಂಗಡಿಯವೊಂದನ್ನು ನಡೆಸುತ್ತಿದ್ದು ಮನೋಜ ನಾಯ್ಕ್ ಎಂಬಾತ ಈತನ ಅಂಗಡಿಯಲ್ಲಿ ಉದ್ರಿ ಮಾಡಿದ್ದು ಇoದು ಈತನ ಅಂಗಡಿಯಲ್ಲಿ ಸಿಗರೇಟ್ ತೆಗೆದುಕೊಂಡಾಗ ಬಾಕಿ ಹಣ ಕೇಳಿದ್ದಕ್ಕೆ ವಾಗ್ವಾದ ನಡೆಯಿತೆoದು ಹೇಳಲಾಗಿದೆ.ಆಗ ಮನೋಜ ಅಂಗಡಿಯಲ್ಲಿದ್ದ ಸೋಡಾ ಬಾಟಲಿಯಿಂದ ಚಂದ್ರು ಪೂಜಾರಿಗೆ ಹಲ್ಲೆ ಮಾಡಿದ ಬಗ್ಗೆ ತಿಳಿದುಬರುತ್ತದೆ. ಈ ಕುರಿತಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ ಎಂದು ವರದಿಯಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



