ಅರಣ್ಯ ಕಾನೂನು ಅರಣ್ಯವಾಸಿಗಳಿಗೆ ಜಾಗೃತಿ ಮೂಡಿಸಲು ಪಾದಯಾತ್ರೆ: ರವೀಂದ್ರ ನಾಯ್ಕ
ಆಪ್ತ ನ್ಯೂಸ್ ಸಿದ್ದಾಪುರ:
ಅರಣ್ಯವಾಸಿಗಳಿಗೆ ಕಾನೂನು ತಿಳುವಳಿಕೆ, ಮಾಹಿತಿ ಮತ್ತು ಜಾಗೃತೆ ಮೂಡಿಸುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲಾದ್ಯಂತ ಪಾದಯಾತ್ರೆ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಸಂಘಟಿಸಲು ಚಿಂತಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಇಂದು ಸಿದ್ದಾಪುರದ ಗ್ರೀನ್ ಕಾರ್ಡ ಪ್ರಮುಖರೊಂದಿಗೆ ಅರಣ್ಯವಾಸಿಗಳಿಗೆ ಉಂಟಾಗುತ್ತೀರುವ ಕಾನೂನು ತೊಡಕು ಉಂಟಾಗುತ್ತಿರುವ ಬಗ್ಗೆ ಚರ್ಚಿಸುತ್ತಾ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅರಣ್ಯ ಭೂಮಿ ಹಕ್ಕು, ಒಕ್ಕಲೆಬ್ಬಿಸುವ ಪ್ರಕ್ರಿಯೆ, ಅರಣ್ಯ ಸಿಬ್ಬಂಧಿಗಳಿಂದ ದೌಜನ್ಯ, ಕಿರುಕುಳ ಇವುಗಳಿಂದ ಹೆಚ್ಚಿನ ಕಾನೂನಾತ್ಮಕ ತಿಳುವಳಿಕೆ ಅರಣ್ಯವಾಸಿಗಳಿಗೆ ನೀಡಿ ಜಾಗೃತಿ ಮೂಡಿಸುವುದು ಮತ್ತು ಅರಣ್ಯವಾಸಿಗಳಿಗೆ ಕಾನೂನು ಜಾಗೃತ ಮೂಡಿಸುವುದು ಗ್ರೀನ್ ಕಾರ್ಡ ಪ್ರಮುಖರ ಜವಾಬ್ದಾರಿ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜಿಲ್ಲಾದ್ಯಂತ ಅರಣ್ಯ ಇಲಾಖೆಯ ಒಕ್ಕಲೆಬ್ಬಿಸುವ ಪ್ರಾಧಿಕಾರದಿಂದ ಒಕ್ಕಲೆಬ್ಬಿಸುವಿಕೆಯ ನೋಟಿಸ್ ಬರುತ್ತೀರುವುದರಿಂದ ಅರಣ್ಯವಾಸಿಗಳಿಗೆ ಸೂಕ್ತ ಕಾನೂನು ಮಾಹಿತಿ ಕೊರತೆಯಿಂದ ಒಕ್ಕಲೆಬ್ಬಿಸುವ ಆದೇಶಗಳು ಆಗಿರುವುದು ವಿಷಾಧಕರ. ಈ ಹಂತದಲ್ಲಿ ಸಮಾಜವಾದಿ ಅರಣ್ಯವಾಸಿಗಳು ಗ್ರೀನ್ ಕಾರ್ಡ ಪ್ರಮುಖರು ಕಾರ್ಯ ನಿರ್ವಹಿಸುವ ಜವಾಬ್ದಾರಿ ಎಂದು ಅವರು ಹೇಳಿದರು.
ಚರ್ಚೆಯಲ್ಲಿ ಸಂಚಾಲಕರಾದ ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ರಾಘು ಕವಂಚೂರು, ಬಿ ಡಿ ನಾಯ್ಕ, ನೆಹರು ನಾಯ್ಕ, ಗೋವಿಂದ ಗೌಡ, ಮಂಜುನಾಥ ಮಡಿವಾಳ, ರಾಮಚಂದ್ರ ನಾಯ್ಕ, ಧನಂಜಯ, ಅಶೋಕ ಇಟಗಿ, ಚಂದ್ರಕಾAತ ನಾಯ್ಕ, ಜಗದೀಶ ಶಿರಲಗಿ, ಎಲ್ ಬಿ ನಾಯ್ಕ ಸಿದ್ದಾಪುರ, ಶಿವಾನಂದ ಹೊಸೂರು, ಜನಾರ್ಧನ ಸಿದ್ದಾಪುರ, ಸುಧಾಕರ ಮಡಿವಾಳ, ಸಂಕೇತ ಹಲಗೇರಿ, ಆರ್ ಟಿ ನಾಯ್ಕ ವಾಜಗೋಡ, ಸುಬಾಬ್ ಸಾಬ, ನಾಗೇಶ ಒಕ್ಕಲಿಗ, ಕಾರ್ಲಿಸ್ ಫರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.
ಹೋರಾಟ ಕಾನೂನು ಪೂರಕ:
ಅರಣ್ಯವಾಸಿಗಳ ವಾಸ್ತವ್ಯ ಮತ್ತು ಸಾಗುವಳಿಗಾಗಿ ಜರುಗುತ್ತೀರುವ ಹೋರಾಟವೂ ಕಾನೂನು ಪೂರಕವಾಗಿದ್ದು, ಅರಣ್ಯವಾಸಿಗಳಿಗೆ ಕಾನೂನು ಸಭಲೀಕರಣದ ಅಂಗವಾಗಿ ೩೨,೦೦೦ ಕುಟುಂಬಗಳಿಗೆ ಉಚಿತ ಜಿಪಿಎಸ್ ಮೇಲ್ಮನವಿ ಸಂಘಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



