ಸಾಲ ನೀಡದ ಬ್ಯಾಂಕ್ ಗಳು, ಕ್ರಮಕ್ಕೆ ಸುಭಾಸ ನಾಯ್ಕ್ ಆಗ್ರಹ

ಆಪ್ತ ನ್ಯೂಸ್ ಶಿರಸಿ:
ಸೆ. 29ರಂದು ಉತ್ತರ ಕನ್ನಡ ಜಿಲ್ಲಾ ಜಾಗ್ರತಿ ಮತ್ತು ಉಸ್ತುವಾರಿ ಸಮಿತಿ ಸಭೆ ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಸಮಿತಿ ಸದಸ್ಯರು ಹಾಗೂ ಶಿರಸಿ ಭಗತ್ ಸಿಂಗ್ ಬ್ರಿಗೇಡ್ ಅಧ್ಯಕ್ಷ ಸುಭಾಸ ನಾಯ್ಕ್ ಅವರು ಮಾತನಾಡಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದಿಂದ ಇರುವಂತಹ ಉದ್ಯೋಗ ಸಂಬಂದಿಸಿದ ಮುದ್ರಾ ಸಾಲ, PMEGP, startup india, ಸ್ವ ಉದ್ಯೋಗ ಯೋಜನೆ ಸಾಲ ಕೇಳಲು ಸರಕಾರಿ ಬ್ಯಾಂಕ್ ಗಳಿಗೆ ಹೋದರೆ ಅಲ್ಲಿ ಕೆಲವೊಂದು ಬ್ಯಾಂಕ್ ಸಿಬ್ಬಂದಿಗಳಿಂದ ಆಗುತ್ತಿರುವ ಅಸಹಕಾರ ಮತ್ತು ಸರಿಯಾಗಿ ಮಾಹಿತಿ ನೀಡದೆ ಬಡವರಿಗೆ ತೊಂದರೆ ನೀಡುತ್ತಿದ್ದಾರೆ ಇದರಿಂದ ಬಡವರು ವ್ಯಾಪಾರ ಪ್ರಾರಂಭ ಮಾಡಲು ಬ್ಯಾಂಕ್ ಹೊರತಾಗಿ ಮೀಟರ್ ಬಡ್ಡಿ ಸಾಲದ ಮೊರೆ ಹೋಗುತ್ತಿದ್ದಾರೆ, ಇದನ್ನು ತಪ್ಪಿಸಲು ಲೀಡ್ ಬ್ಯಾಂಕ್ ಗೆ ಸೂಚನೆ ನೀಡಲು ವಿನಂತಿಸಿದರು.
ಅಲ್ಲದೆ ಕಾರಣವಿಲ್ಲದೆ ಸಾಲ ರಿಜೆಕ್ಟ್ ಮಾಡುವ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
What's Your Reaction?






