ಸಚಿವ ಹೆಚ್.ಕೆ ಪಾಟೀಲರನ್ನು ಭೇಟಿ ಮಾಡಿದ ಬೇಡ್ತಿ ಸಮಿತಿ: ಮಾರಕ ಯೋಜನೆ ಕೈಬಿಡಲು ಆಗ್ರಹ
ಆಪ್ತ ನ್ಯೂಸ್ ಶಿರಸಿ:
ಬೆಂಗಳೂರಲ್ಲಿ ಗಾಂಧಿ ಭವನದಲ್ಲಿ ಸಡೆದ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡ ಪರಿಸರ ದುಂಡು ಮೇಜಿನ ಸಭೆ ಪಶ್ಚಿಮ ಘಟ್ಟದಲ್ಲಿ ಮಾರಕ ಯೋಜನೆಗಳನ್ನು ಸರ್ಕಾರ ಜಾರಿ ಮಾಡಬಾರದು ಎಂದು ಆಗ್ರಹ ಮಾಡಿದೆ.
ರಾಷ್ಟ್ರೀಯ ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಎಸ್. ಆರ್. ಹಿರೇಮಠ, ನಿವೃತ್ತ ಸುಪ್ರಿಂ ಕೋರ್ಟ ನ್ಯಾಯಾಧೀಶ ಗೋಪಾಲಗೌಡ ಮಾಜಿ ಶಾಸಕರಾದ ಎ.ಟಿ ರಾಮಸ್ವಾಮಿ, ವಿವಿಧ ಮಠಾಧೀಶರು, ವಿಜ್ಞಾನಿ ಡಾ| ಟಿ.ವಿ ರಾಮಚಂದ್ರ, ಕೃಷಿ ತಜ್ಞ ಡಾ| ಪ್ರಕಾಶ ಕಮ್ಮರಡಿ, ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ ಅವರು ಸಹ್ಯಾದ್ರಿ ನದಿ ಕಣಿವೆಗಳ ಸಂರಕ್ಷಣೆಗೆ ಒತ್ತಾಯ ಮಾಡಿದರು.
ವೃಕ್ಷ ಲಕ್ಷ ಆಂಧೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಶರಾವತಿ, ಬೇಡ್ತಿ, ಅಘನಾಶಿನಿ ಯೋಜನೆಗಳು ಪಶ್ಚಿಮ ಘಟ್ಟದಲ್ಲಿ, ಭೂಕುಸಿತಕ್ಕೆ ಜಲಾನಯನಗಳ ನಾಶಕ್ಕೆ ಕಾರಣವಾಗಲಿವೆ. ದಕ್ಷಿಣ ಭಾರತದ ಆಹಾರ ಸುರಕ್ಷತೆಗೆ ಸಹ್ಯಾದ್ರಿ ಉಳಿವು ಮುಖ್ಯ. ರಾಜ್ಯ-ಕೇಂದ್ರ ಸರ್ಕಾರಗಳು ಮಲೆನಾಡಿನ ಸುಸ್ಥಿರ ಅಭಿವೃದ್ಧಿಗೆ ಆಧ್ಯತೆ ನೀಡಬೇಕು ಎಂದು ತಮ್ಮ ೪೦ ವರ್ಷಗಳ ಪಶ್ಚಿಮ ಘಟ್ಟ ಉಳಿಸಿ ಆಂದೋಲನದ ರಚನಾತ್ಮಕ ಜನಾಂದೋಲನಗಳನ್ನು ಮಂಡಿಸಿದರು.
೩೦-೧೦-೨೦೨೫ ರಂದು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ ಅವರನ್ನು ಬೆಂಗಳೂರಲ್ಲಿ ಬೇಡ್ತಿ ಸಮೀತಿ ತಂಡ ಭೇಟಿ ಮಾಡಿತ್ತು. ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಡಿ ಪಿ ಆರ್ ತಯಾರಿ ನಡೆದಿದೆ. ಬೇಡ್ತಿ ಅಘನಾಶಿನಿ ಕಣಿವೆ ಜನತೆ ಪುನಃ ನದಿ ಯೋಜನೆಗಳು ವಿನಾಶಕಾರಿ ಎಂದು ಹೋರಾಟ ಶುರು ಮಾಡಿರುವ ಸಂಗತಿಯನ್ನು ಸಮೀತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೆಚ್ ಕೆ ಪಾಟೀಲ ಅವರ ಗಮನಕ್ಕೆ ತಂದರು. ಸರ್ಕಾರ ಈ ಯೋಜನೆ ಪುನರ್ವಿಮರ್ಶೆ ಮಾಡಬೇಕು ಎಂದು ಮನವಿ ಮಾಡಿದರು.
ಉ.ಕ, ಶಿರಸಿ ಪ್ರದೇಶದ ಬಗ್ಗೆ ಅಭಿಮಾನ, ಕಾಳಜಿ ವ್ಯಕ್ತ ಮಾಡಿದ ಹಿರಿಯ ಸಚಿವ ಹೆಚ್.ಕೆ ಪಾಟೀಲ ಅವರು ೨೦ ವರ್ಷ ಹಿಂದೆ ಬೇಡ್ತಿ ನದಿ ಜೋಡಣೆ ಯೋಜನೆ ಮಾಹಿತಿಯನ್ನು ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ, ಶಾಂತಾರಾಮ ಹೆಗಡೆ, ಅನಂತ ಅಶೀಸರ ಅವರಿಗೆ ನೀಡಿದ್ದೆ” ಎಂಬ ಸಂಗತಿಯನ್ನು ನೆನಪಿಸಿದರು. ಬೇಡ್ತಿ ಸಮೀತಿ ಸ್ಥಳೀಯ ಜಲ ಸದ್ಬಳಕೆ ಯೋಜನೆಯನ್ನು ಸರ್ಕಾರಕ್ಕೆ ನೀಡಿತ್ತು” ಎಂಬ ಸಂಗತಿಯನ್ನು ಉಲ್ಲೇಖಿಸಿದರು. ಬೇಡ್ತಿ ಸಮೀತಿ ಮನವಿ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದು ಪಾಟೀಲ ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



