ಭಾವಗೀತೆಗಳು ಮನ ಪ್ರಫುಲ್ಲತೆಯನ್ನ ನೀಡುತ್ತವೆ : ವಾಸರೆ
ಆಪ್ತ ನ್ಯೂಸ್ ದಾಂಡೇಲಿ:
ಡಿಸೆಂಬರ 13,14,15 ರಂದು ದಾಂಡೇಲಿಯಲ್ಲಿ ನಡೆಯಲ್ಲಿರುವ ಉತ್ತರನ್ನಡ ಜಿಲ್ಲಾ 25 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಭಾವಗೀತೆಗಳ ಸ್ಪರ್ಧಾ ಕಾರ್ಯಕ್ರಮಕ್ಕೆ ಕಸಾಪ ಜಿಲ್ಲಾಧ್ಯಕ್ಷ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಜಿಲ್ಲೆಯ ಸಾಹಿತಿಗಳನ್ನು ನೆನಯುವ ದೃಷ್ಟಿಯಿಂದ ಅವರ ಸಾಹಿತ್ಯದ ಪರಿಚಯವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಿಲ್ಲೆಯ ಕವಿಗಳ ಕವಿತೆಗಳನ್ನೆ ಸ್ಪರ್ಧೆಯಲ್ಲಿ ಬಳಸುವಂತೆ ಹೇಳಲಾಗಿದ್ದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈ ಸಮ್ಮೇಳನದ ಭಾಗವಾಗಿ ಹಲವು ಸ್ಪರ್ಧೆ ಆಯೋಜಿಸಲಾಗಿದೆ. ಭಾವಗೀತೆಗಳು ಮನ ಪ್ರಫುಲ್ಲತೆಯನ್ನು ನೀಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಮ್. ಡಿ. ಒಕ್ಕುಂದ ಮಾತನಾಡಿ
ಭಾವದ ತೀವ್ರತೆಯನ್ನು ಪದಗಳಲ್ಲಿ ಬಂಧಿಸಿ ಅದನ್ನೇ ರಾಗವಾಗಿ ಹಾಡುವಂತೆ ಮಾಡುವುದೇ ಈ ಭಾವಗೀತೆಗಳ ಹೆಚ್ಚುಗಾರಿಕೆಯಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಸ್ಪರ್ಧೆ ಆಯೋಜಿಸಿದ್ದು ಅರ್ಥಪೂರ್ಣವಾದುದು ಎಂದರು.
ನಿರ್ಣಾಯಕರಾದ ಡಾ . ವಿನಯಾ ನಾಯಕ, ಸುನೀತಾ ಹೆಗಡೆ, ಸುರೇಶ ವಾಲೇಕರ ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ಸುನಿತಾ ಎಂ. ಜೋಗ ಸ್ವಾಗತಿಸಿದರು.
ಗೀತಾ ಕೋಟೆನ್ನವರ ಮತ್ತು ಉಮೇಶಗೌಡ ಪಾಟೀಲ ನಿರೂಪಿಸಿದರು.
ಪದ್ಮಾವತಿ ಅನಸಕರ ವಂದಿಸಿದರು.
ಸ್ಪರ್ಧಾ ವಿಜೇತರು :
ಬವಾವಗೀತೆ ಸ್ಪರ್ಧೆಯಲ್ಲಿ ಜಿಲ್ಲೆಯೆಲ್ಲಡೆಯಿಂದ ಭಾಗವಹಿಸಿದ್ದರು. ಕುಮಟಾದ ಧೀರಜ ಹೆಗಡೆ ಪ್ರಥಮ, ದಾಂಡೇಲಿಯ ಕಾವ್ಯಾ ಭಟ್ ದ್ವಿತೀಯ, ಶಿರಸಿಯ ಜ್ಯೋತಿ ನಾಯ್ಕ ತೃತೀಯ ಬಹುಮಾನ ಪಡೆದು ಕೊಂಡರೆ, ಸೀಮಾ ಗೌಡಾ ಹಾಗೂ ಭಾವನಾ ಪುರೋಹಿತ ಸಮಾಧನಕರ ಬಹುಮಾನ ಪಡೆದುಕೊಂಡರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



