ಸುನೀಲ್ ಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ಭೀಮಣ್ಣ
ರಸ್ತೆ ಹೊಂಡದ ಬಗ್ಗೆ ಮಾತಾಡಿದ್ದ ಸುನೀಲ್ ಹೇಳಿಕೆಗೆ ಟಾಂಗ್ ನೀಡಿರುವ ಭೀಮಣ್ಣ ನಾಯ್ಕ್ ರಸ್ತೆ ಗುಂಡಿ ಕುರಿತು ನೀಡಿರುವ ಸಕತ್ ಹೇಳಿಕೆ ಇಲ್ಲಿದೆ ನೋಡಿ

ಶಿರಸಿ: ನಿನ್ನೆ ಶಿರಸಿಗೆ ಭೇಟಿ ನೀಡಿದ್ದ ಮಾಜಿ ಸಚಿವ ಸುನಿಲ್ ಕುಮಾರ್ ಉಡುಪಿಯಿಂದ ಶಿರಸಿಗೆ ಬರುವಾಗ ರಸ್ತೆಯಲ್ಲಿ 5000 ಹೊಂಡ ಲೆಕ್ಕ ಹಾಕಿದ್ದಾಗಿ ಹೇಳಿದ್ದನ್ನು ಶಾಸಕ ಭೀಮಣ್ಣ ನಾಯ್ಕ್ ತೀವ್ರವಾಗಿ ಛೇಡಿಸಿದ್ದಾರೆ.
ಅವರು ಸಾಗಿ ಬಂದ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಅವರದೇ ಪಕ್ಷದ ಸಂಸದರು ಇದಕ್ಕೆ ಉತ್ತರಿಸಬೇಕು ಎಂದಿದ್ದಾರೆ. ಅವರಿಂದು ಶಿರಸಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾತನಾಡುವಾಗ ವಾಸ್ತವ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು ಎಂದು ಸುನಿಲಕುಮಾರ್ ವಿರುದ್ಧ ಹರಿಹಾಯ್ದ ಭೀಮಣ್ಣ ನಾಯ್ಕ್, ಸರಕಾರ ಬೀಳುವ ಅವರ ಕನಸು- ಬಿಜೆಪಿಯ ಪಾಲಿಗೆ ತಿರುಕನ ಕನಸು ಎಂದರು. ಕೇಂದ್ರ ಸರಕಾರ ರಾಜ್ಯದ ಪಾಲು ನೀಡಿದರೆ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧ್ಯ ಎಂದು ಹೇಳಲು ಮರೆಯಲಿಲ್ಲ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಕುರಿತು ಧ್ವನಿ ಎತ್ತುವ ಅಗತ್ಯ ಇದೆ ಎಂದು ಭೀಮಣ್ಣ ಈ ಸಂದರ್ಭದಲ್ಲಿ ಹೇಳಿದರು.
ಪತ್ರಿಕಾಘೋಷ್ಟಿಯಲ್ಲಿ ಗಣೇಶ ದಾವಣಗೆರೆ,ಜಗದೀಶ್ ಗೌಡ,ಪ್ರದೀಪ್ ಶೆಟ್ಟಿ,ಗೀತಾ ಜನಾರ್ಧನ ಶೆಟ್ಟಿ, ಸುಮಾ ಉಗ್ರಾಣಕರ್, ಖಾದರ್ ಆನವಟ್ಟಿ,ವೆಂಕಟೇಶ್ ಹೆಗಡೆ ಹೊಸಬಾಳೆ, ಭಾಗವತ್ ಉಪಸ್ಥಿತರಿದ್ದರು.
What's Your Reaction?






