ಲಾರಿಗೆ ಡಿಕ್ಕಿ ಹೊಡೆದ ಬೈಕ್: ಓರ್ವ ಬಲಿ, ಇನ್ನೋರ್ವ ಗಂಭೀರ

ಆಪ್ತ ನ್ಯೂಸ್ ಯಲ್ಲಾಪುರ:
ಕಂಟೇನರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವು ಕಂಡಿದ್ದು ಇನ್ನೊಬ್ಬ ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಕಿರವತ್ತಿಯ ಬಳಿ ರವಿವಾರ ನಡೆದಿದೆ.
ಬೈಲಂದೂರಿನ ಛಾಯಪ್ಪ ಸೋಮಾಪುರಕರ್ (45) ಮೃತಪಟ್ಟ ವ್ಯಕ್ತಿ. ಡಿಕ್ಕಿಯ ರಭಸಕ್ಕೆ ಬಿದ್ದಿದ್ದ ಸವಾರನ ತಲೆಯ ಮೇಲೆ ಲಾರಿಯ ಚಕ್ರ ಹಾದುಹೋಗಿದೆ.ಇನ್ನೊಬ್ಬ ಸವಾರ ಪ್ರಭಾಕರ ಸೋಮಾಪುರಕರ್ ಅವರು ತೀವೃ ಗಾಯಗೊಂಡಿದ್ದು, ತಾಲೂಕಿನ ಸಮುದಾಯ ಆಸ್ಪತ್ರೆಯಲ್ಲಿ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
What's Your Reaction?






