ಬಿ.ಎನ್. ವಾಸರೆಗೆ ಯಲ್ಲಾಪುರದ ಸಂಕಲ್ಪ ಪ್ರಶಸ್ತಿ

Nov 7, 2025 - 14:59
 0  12
ಬಿ.ಎನ್. ವಾಸರೆಗೆ ಯಲ್ಲಾಪುರದ ಸಂಕಲ್ಪ ಪ್ರಶಸ್ತಿ

ಆಪ್ತ ನ್ಯೂಸ್ ದಾಂಡೇಲಿ:

ಉತ್ತರಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲ್ಪಡುವ  ಯಲ್ಲಾಪುರದ ಪ್ರಮೋದ ಹೆಗಡೆ ಸಾರಥ್ಯದ ಸಂಕಲ್ಪ  ಸೇವಾ ಸಂಸ್ಥೆಯಿಂದ  ವಾರ್ಷಿಕವಾಗಿ ಕೊಡ ಮಾಡುವ 'ಸಂಕಲ್ಪ ಪ್ರಶಸ್ತಿ' ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಹಿರಿಯ ಪತ್ರಕರ್ತ ಬಿ.ಎನ್. ವಾಸರೆ ಭಾಜನರಾಗಿದ್ದಾರೆ. 

 ಅವರು ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ಸಂಕಲ್ಪ ಸೇವಾ  ಸಂಸ್ಥೆ ತಿಳಿಸಿದೆ. ಸಂಕಲ್ಪ ಉತ್ಸವದಲ್ಲಿ ಬಿ.ಎನ್. ವಾಸರೆಯವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ  ಸಂಕಲ್ಪ ಸೇವಾ ಸಂಸ್ಥೆಯ ಪ್ರಸಾದ ಹೆಗಡೆ, ಪ್ರಶಾಂತ ಹೆಗಡೆ,  ಪ್ರಮುಖರಾದ  ಡಿ. ಶಂಕರ ಭಟ್,  ಬೀರಣ್ಣ ನಾಯಕ, ಮೊಗಟಾ,  ವೆಂಕಟೇಶ ಹೆಗಡೆ, ಹೊಸಬಾಳೆ, ಎಮ್.ಆರ್ ಹೆಗಡೆ, ಚಿಕ್ಯಾನಮನೆ, ಮುಂತಾದವರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0