ಉದ್ಯಮಿ ಉದಯ್ ನಾಯ್ಕ್ ಮನೆಗೆ ಕಳ್ಳರ ಕಾಟ

ಆಪ್ತ ನ್ಯೂಸ್ ಶಿರಸಿ:
ಉದ್ಯಮಿ ಉದಯ್ ನಾಯ್ಕ್ ಮನೆಯ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಶಿರಸಿಯ ಮಾರಿಕಾಂಬಾ ನಗರದ ಹಾಲೊಂಡ ಬಡಾವಣೆಯಲ್ಲಿ ಉದ್ಯಮಿ ಉದಯ ನಾಯ್ಕ ಮನೆ ಇದ್ದು, ಇಲ್ಲಿ ಕಳ್ಳರು ಕಳ್ಳತನ ನಡೆಸಿದ್ದಾರೆ.
ಮನೆಯ ಮುಂಭಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಮನೆಯೆಲ್ಲಾ ಜಾಲಾಡಿ ನಗದು, ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದಾರೆಂದು ತಿಳಿದು ಬಂದಿದೆ. ಪೋಲಿಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
What's Your Reaction?






