ಎಲೆ ಮಾನವರ ಮೇಲೆ ಪ್ರಕರಣ ದಾಖಲು
ಆಪ್ತ ನ್ಯೂಸ್ ದಾಂಡೇಲಿ:
ನಗರದ ಸಾಹೇಲಿ ಲಾಡ್ಜ್ ಹಿಂಭಾಗದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿಕೊಂಡಿದ್ದ ಆರು ಜನ ಎಲೆ ಮಾನವರ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಇಸ್ಪೀಟ್ ಎಲೆಗಳು ಮತ್ತು 3,500 ರೂ. ನಗದು ಹಣವನ್ನು ನಗರ ಠಾಣೆ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಅಸ್ಲಾಂ ಕಾಸೀಂಸಾಬ ನಿರಲಗಿ (42), ದಾವಲಸಾಬ ಕಾಸಿಂಸಾಬ ನಿರಲಗಿ (40), ಮಂಜುನಾಥ ಹರಿಜನ (30), ರಿಜ್ವಾನ ಅಬ್ದುಲ್ (32), ಬಾಲರಾಜ ಗಿರಿಯಾಳ (23) ಮಹ್ಮದ ತಹಶೀಲ್ದಾರ(42) ಮೇಲೆ ಪ್ರಕರಣ ದಾಖಲಿಸಲಾಗಿದೆ. ಪಿಎಸ್‌ಐ ಅಮೀನ್ ಅತ್ತಾರ್ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



