ಶರಾವತಿ ಯೋಜನೆಗೆ ತಡೆ ಹಾಕಿದ ಕೇಂದ್ರ
ಆಪ್ತ ನ್ಯೂಸ್ ನವದೆಹಲಿ:
ಪಶ್ಚಿಮ ಘಟ್ಟದ ಹಸಿರು ಹೊದಿಕೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ಕರ್ನಾಟಕದ 2,000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿ (FCA) ಅನುಮೋದನೆ ನೀಡದೆ ತಡೆಯೊಡ್ಡಿದೆ.
ಶರಾವತಿ ಲಯನ್-ಟೈಲ್ಡ್ ಮಕಾಕ್ ವನ್ಯಜೀವಿ ಅಭಯಾರಣ್ಯದ ಒಡಲಿನಲ್ಲಿ ನಡೆಯಬೇಕಿದ್ದ ಈ ರೂ. 10,240 ಕೋಟಿ ವೆಚ್ಚದ ಯೋಜನೆಯಿಂದ 54 ಹೆಕ್ಟೇರ್ ಅರಣ್ಯ, 15 ಸಾವಿರಕ್ಕೂ ಹೆಚ್ಚು ಮರಗಳು ಸೇರಿದಂತೆ ಭೂಕುಸಿತ ಅಪಾಯ ಮತ್ತು ಜೀವವೈವಿಧ್ಯದ ನಾಶದ ಆತಂಕ ಎದ್ದಿದ್ದವು.ರಾಜ್ಯ ವನ್ಯಜೀವಿ ಮಂಡಳಿ ಷರತ್ತುಬದ್ಧ ಅನುಮತಿ ನೀಡಿದ್ದರೂ, ಪರಿಸರವಾದಿಗಳ ತೀವ್ರ ವಿರೋಧ ಮತ್ತು ಸಾರ್ವಜನಿಕ ಆಕ್ರೋಶದ ನಂತರ ಕೇಂದ್ರ ಈ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಪರಿಸರವಾದಿಗಳು- ಪರಿಸರ ಪ್ರಿಯರು
“ಪಶ್ಚಿಮ ಘಟ್ಟದ ಉಸಿರನ್ನು ಉಳಿಸಿದ ದಿನ ಇದು” ಎಂದು ಹೇಳಿದ್ದಾರೆ. ಈ ನಡುವೆ KPCL ಇನ್ನೂ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಆದರೆ ಈಗಲಾದರೂ ಪ್ರಕೃತಿಯ ಧ್ವನಿಗೆ ಕಿವಿಗೊಟ್ಟ ಸರ್ಕಾರದ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



