ಸೊಪ್ಪಿನ ಬೆಟ್ಟ ಖರಾಬ್ ಅಲ್ಲ! ನಿಯಮ ಬದಲಿಸುವಂತೆ ಈಶ್ವರ ಖಂಡ್ರೆಗೆ ಅನಂತಮೂರ್ತಿ ಹೆಗಡೆ ಮನವಿ
ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿದ ಶಿರಸಿಯ ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಂಕಷ್ಟವನ್ನು ತೋಡಿಕೊಂಡರು. ಬೆಟ್ಟವನ್ನು ಬಿ ಖರಾಬ್ ಎಂದು ಆರ್ ಟಿ ಸಿ ಯಲ್ಲಿ ನಮೂದಿಸುವ ಪ್ರಸ್ತಾವನೆಯನ್ನು ತೆಗೆದುಹಾಕಬೇಕು ಎಂದು ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆ ಶೇ.80% ಅರಣ್ಯ ಪ್ರದೇಶದಿಂದ ಕೂಡಿದ್ದು, ಸಾಮಾನ್ಯವಾಗಿ ಇಲ್ಲಿನ ಜನ ಮನೆಯಿಂದ ಹೊರಗೆ ಕಾಲಿಟ್ಟರೆ ಅರಣ್ಯ ಪ್ರದೇಶವೇ ಆಗಿದೆ. ಹೀಗಿರುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತಿಚೆಗೆ ಬಡ ಸಾರ್ವಜನಿಕರು, ರೈತರ ಮೇಲೆ ಅರಣ್ಯ ಒತ್ತುವರಿ ವಿಚಾರದಲ್ಲಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಳೆದ 50-60 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಫಲ ಬರುತ್ತಿದ್ದ ರೈತರ ತೋಟಗಳನ್ನು ನಾಶಪಡಿಸಿ, ಸಾವಿರಾರು ಜನರಿಗೆ ನೋಟೀಸನ್ನು ಈಗಾಗಲೇ ನೀಡಿದ್ದಾರೆ. ಈ ಕಾರಣಕ್ಕೆ ಜಿಲ್ಲೆಯ ಬಹುಪಾಲು ಜನರೀಗ ಆತಂಕದಲ್ಲಿದ್ದಾರೆ. ಬೀದರ್, ಕಲಬುರ್ಗಿ, ವಿಜಯಪುರ ಸೇರಿದಂತೆ ರಾಜ್ಯದ ಇತರೆಡೆಯ ಅರಣ್ಯ ಒತ್ತುವರಿಗೂ ಉತ್ತರ ಕನ್ನಡ ಜಿಲ್ಲೆಗೂ ತೀರಾ ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ತಾವು ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಒಮ್ಮೆ ದಯವಿಟ್ಟು ಭೇಟಿ ನೀಡಿ, ವಾಸ್ತವ ಅಂಶವನ್ನು ಒಮ್ಮೆ ಮನಗಾಣಬೇಕು. ಇಲ್ಲಿನ ಜನರ ಸಂಕಷ್ಟದ ವಾಸ್ತವತೆಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು. ಪುಸ್ತಕದಲ್ಲಿನ ಕಾನೂನುಗಳು ಎಲ್ಲಡೆಯೂ ಒಂದೇ ರೀತಿ ಮಾಡುವುದು ಕಷ್ಟಸಾಧ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಗೆ ಶೀಘ್ರವಾಗಿ ಆಗಮಿಸುವಂತೆ ಕೇಳಿಕೊಳ್ಳಲಾಯಿತು ಮತ್ತು ಅರಣ್ಯ ಅಧಿಕಾರಿಗಳು ಅಮಾನುಷವಾಗಿ ಅಡಿಕೆ ಮರಗಳನ್ನ ಕಡಿಯುತ್ತಿರುವುದರ ಬಗ್ಗೆ ಗಮನ ಸೆಳೆಯಲಾಯಿತು ಅದಕ್ಕೆ ಸ್ಪಂದಿಸಿದ ಮಾನ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳುವಂತೆ ಜನರಿಗೆ ತೊಂದರೆ ಕೊಡದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೂಚನೆ ನೀಡಿದರು.
ಆ ಸಂದರ್ಭದಲ್ಲಿ ಬನವಾಸಿ ರೈತನ ನಾಯಕರಾದ ರಮೇಶ ನಾಯಕ್ ಕುಪ್ಪಳ್ಳಿ ರಾಘವೇಂದ್ರ ನಾಯಕ್ ಬಿಸಿಲು ಕೊಪ್ಪ ಸೋಮಶೇಖರ್ ನಾಯಕ್ ಬಾಸಿ ಜಗದೀಶ ಹೆಗಡೆ ಬ್ಯಾಗದ್ದೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



