ಆರತಿಬೈಲ್ ಘಟ್ಟದಲ್ಲಿ ಉರುಳಿಬಿದ್ದ ಕಲ್ಲಿದ್ದಲು ಲಾರಿ

ಆಪ್ತ ನ್ಯೂಸ್ ಯಲ್ಲಾಪುರ:
ತಾಲೂಕಿನ ಆರತಿಬೈಲ್ ಘಟ್ಟದ ರಾ ಹೆದ್ದಾರಿ ೬೩ ರ ಬಳಗಾರ ಕ್ರಾಸ ಬಳಿ ಲಾರಿ ಪಲ್ಟಿಯಾಗಿದೆ.
ಮಂಗಳೂರಿನಿಂದ ಕೊಪ್ಪಳಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿಯೇ ಪಲ್ಟಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಲಾರಿಯಲ್ಲಿದ್ದ ಕಲ್ಲಿದ್ದಲು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತೆರವಿಗೆ ಕ್ರಮ ಕೈಗೊಂಡಿದ್ದಾರೆ. ಕೆಲ ಹೊತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ವಾಹನ ಸವಾರರು ಪರದಾಡಿದರು.
What's Your Reaction?






