ದತ್ತ ಮಂದಿರದಲ್ಲಿ ದತ್ತ ಜಯಂತಿ ಆಚರಣೆ

Dec 4, 2025 - 19:32
 0  55
ದತ್ತ ಮಂದಿರದಲ್ಲಿ ದತ್ತ ಜಯಂತಿ ಆಚರಣೆ

ಆಪ್ತ ನ್ಯೂಸ್ ಯಲ್ಲಾಪುರ : 

ಪಟ್ಟಣದ ನಾಯ್ಕನಕೆರೆಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ದತ್ತಮಂದಿರದಲ್ಲಿ ಗುರುವಾರ ದತ್ತ ಜಯಂತಿ ಆಚರಣೆ ನಡೆಯಿತು.

ವಿ.ವೆಂಕಟ್ರಮಣ ಭಟ್ಟ ಮಾಗೋಡು ಹಾಗೂ ವಿ. ವಿದ್ಯಾಧರ ಭಟ್ಟ ಇವರ ಪ್ರಧಾನ ಆಚಾರತ್ವದಲ್ಲಿ ವೈದಿಕರಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.

ಒಂದು ವಾರದಿಂದ ನಡೆಯುತ್ತಿದ್ದ ಗುರುಚರಿತ್ರೆ ಪಾರಾಯಣ ಮುಕ್ತಾಯ, ಕೃಷ್ಣ ಯಜುರ್ವೇದ ಪಾರಾಯಣ, ಫಲ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸತ್ಯದತ್ತ ವೃತ, ದತ್ತ ಮೂಲಮಂತ್ರ ಹವನ, ತೊಟ್ಟಿಲ ಪೂಜೆ, ಕ್ಷೀರಾಭಿಷೇಕ, ಭಸ್ಮಾರ್ಚನೆ. ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಗಳು ಗುರುವಾರ ಜರುಗಿದವು.

ನಂತರ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನರು ಮಹಾ ಪ್ರಸಾದ ಸ್ವೀಕರಿಸಿದರು.

ವೈದಿಕರು, ಸುಮಂಗಲಿಯರು ತೊಟ್ಟಿಲ ಪೂಜೆ ನೆರವೇರಿಸಿ ದತ್ತಮೂರ್ತಿಯನ್ನು ತೊಟ್ಟಿಲಿನಲ್ಲಿರಿಸಿ ಲಾಲಿ ಹಾಡಿದರು.

ಮಾತೆಯರಿಂದ ಭಗವದ್ಗೀತಾ, ವಿಷ್ಣು ಸಹಸ್ರನಾಮ ಪಠಣ ನಡೆಯಿತು. ಡಾ, ಜಿ.ಎ.ಹೆಗಡೆ ಸೋಂದಾ ಅವರಿಂದ ಪುರಾಣ ಲಹರಿ ಕಾರ್ಯಕ್ರಮ ನಡೆಯಿತು.

ಶ್ರೀ ರಾಮಚಂದ್ರಾಪುರ ಮಠದ ಶಾಸನ ತಂತ್ರದ ಅಧ್ಯಕ್ಷ ಮೋಹನ ಹೆಗಡೆ, ಪ್ರಮುಖರಾದ ಜಿ.ಎಲ್. ಹೆಗಡೆ ದತ್ತ ಜಯಂತಿಯ ಕುರಿತು ಮಾತನಾಡಿದರು. ಮಠದ ಪ್ರತಿನಿದಿಗಳಾದ ಕೃಷ್ಣ ಪ್ರಸಾದ, ಶಾಂತಾರಾಮ ಹೆಗಡೆ, ಮಹೇಶ ಚಟ್ನಳ್ಳಿ ಇತರರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0