ಡಿಯರ್ ಬಿಎಸ್ಎನ್ಎಲ್! ಯಾರಿಗೇಳಣಾ ನಮ್ಮ ಪ್ರಾಬ್ಲಮ್ಮು..
ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನ ಪ್ರಮುಖ ಸಂಪರ್ಕ ಮಾಧ್ಯಮಗಳಲ್ಲಿ ಒಂದಾದ ಮೊಬೈಲ್ ಸಂಪರ್ಕದ ಕೆಲ ಟವರ್ ಗಳ ಸೇವೆ ಗ್ರಾಹಕರಿಗೆ ಸರಿಯಾಗಿ ಸಿಗುತ್ತಿಲ್ಲದ ಕಾರಣ, ಆಯಾ ಟವರ್ ಗೆ ಸಂಬಂಧಿಸಿದ ಗ್ರಾಹಕರು ಬಿಎಸ್ಎನ್ಎಲ್ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ದೈನಂದಿನ ವ್ಯವಹಾರ, ಕಚೇರಿ ಕೆಲಸ, ಇತ್ತೀಚಿನ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಾರ್ಯ ಆನ್ ಲೈನ್ ಮುಖಾಂತರ ನಡೆಯುತ್ತಿದೆ. ಕೇಂದ್ರ ಸರ್ಕಾರದ ಬಿಎಸ್ಎನ್ಎಲ್ ಇಲಾಖೆಯ ವತಿಯಿಂದ ಹೊಸ ಟವರ್ ಮಂಜೂರಾಗಿದ್ದು, ನಿರ್ಮಾಣಗೊಂಡ ಕೆಲ ಹೊಸ ಟವರ್ ಗಳಿಗೆ ಇದುವರೆಗೂ ಸಂಪರ್ಕ ಸರಿಯಾಗಿ ನೀಡಿಲ್ಲ. ಹಳೆಯ 2ಜಿ, 3ಜಿ ಟವರ್ ಗಳನ್ನು 4ಜಿ ಗೆ ಅಪ್ ಗ್ರೇಡಿನ ಕೆಲಸ ಇನ್ನೂ ಸರಿಯಾಗಿ ಆಗಿಲ್ಲ.
ಈ ಬಗ್ಗೆ ಗ್ರಾಹಕರು ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳಿಗೆ ತಿಳಿಸಿದರೂ, ಮಾಧ್ಯಮಗಳಲ್ಲಿ ವಾರಕ್ಕೊಂದು ಬಾರಿ ಬಿಎಸ್ಎನ್ಎಲ್ ಅವ್ಯವಸ್ಥೆಯ ವಿರುದ್ಧ ಸುದ್ದಿ ಬಂದರೂ ತಮಗೇನು ಸಂಬಂಧವಿಲ್ಲದಂತೆ ಇಲ್ಲದ ಸಬೂಬುಗಳನ್ನು ಹೇಳುವ ಮೂಲಕ ದಿನಗಳೆಯುತ್ತಿದ್ದಾರೆ, ಎಂಬುದು ತಾಲೂಕಿನ ಜನತೆಯ ದೂರಾಗಿದೆ. ಇದೇ ರೀತಿಯ ಅವ್ಯವಸ್ಥೆಯು ಮುಂದುವರೆದಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ಇಲಾಖೆಯ ವಿರುದ್ಧ ಸಾರ್ವಜನಿಕರು ಪ್ರತಿಭಟಿಸುವ ಅನಿವಾರ್ಯತೆ ಬಂದದೊಗಲಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



