ಹೊಯ್ಸಳ ಸಾಹಿತ್ಯ ರಾಜ್ಯ ಪ್ರಶಸ್ತಿಗೆ ದೀಪಾಲಿ ಆಯ್ಕೆ
ಆಪ್ತ ನ್ಯೂಸ್ ದಾಂಡೇಲಿ:
ಮಾಣಿಕ್ಯ ಪ್ರಕಾಶನ(ರಿ.), ಹಾಸನ ವತಿಯಿಂದ ನವೆಂಬರ್ 02 ರಂದು ಭಾನುವಾರ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಳ್ಳುವ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕವಯತ್ರಿ ದೀಪಾಲಿ ದೀಪಕ್ ಸಾಮಂತರಿಗೆ "ಹೊಯ್ಸಳ ಸಾಹಿತ್ಯ ರಾಜ್ಯ.ಪ್ರಶಸ್ತಿ" ಸಹಿತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯ ಹಾಗೂ ಹೊರ ರಾಜ್ಯದ 17 ಸಾಧಕರಿಗೆ 2025 ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಟ್ರಸ್ಟಿಗಳಾದ ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್, ವಾಸು ಸಮುದ್ರವಳ್ಳಿ, ದೇಸು ಆಲೂರು, ಡಾ. ಪಿ. ದಿವಾಕರ ನಾರಾಯಣ, ಬೆಳಗಾವಿ ಜಿಲ್ಲಾಧ್ಯಕ್ಷೆ ಸುಶೀಲಾ ಲ. ಗುರವ ಅವರನ್ನೊಳಗೊಂಡ ಆಯ್ಕೆ ಸಮಿತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ವಿವಿಧ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0



