ಆಪ್ತ ನ್ಯೂಸ್ ಶಿರಸಿ:
ತಾಲೂಕಿನ ಸುಧಾಪುರ ಕ್ಷೇತ್ರದ ಶಾಲ್ಮಲಾ ನದೀ ತೀರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಸೋಂದಾ ಕೋಟೆಯಲ್ಲಿ ಕಳೆದ ಶನಿವಾರ ಶ್ರೀ ಪೇಟೆ ಹನುಮಂತ ದೇವರಿಗೆ ದಿಪೋತ್ಸವ ಸೇವೆ ಸಲ್ಲಿಸಲಾಯಿತು.
ಸೋದೆ ಅರಸರು ಶಾಲ್ಮಲಾ ನದಿ ತೀರದ ಈ ಸ್ಥಳವನ್ನು ಸುರಕ್ಷಿತ ತಾಣವೆಂದು ಗುರುತಿಸಿ ಕೋಟೆಯನ್ನು ನಿರ್ಮಿಸಿ, ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಇಲ್ಲಿಂದಲೇ ಆಡಳಿತ-ವ್ಯವಹಾರ ನಡೆಸುತ್ತಿದ್ದರು. ರಾಜರು ತಮ್ಮ ನಾಡಿನ ರಕ್ಷಣೆಗೊಸ್ಕರ ಕೋಟೆಯ ಪೂರ್ವ ಹೆಬ್ಬಾಗಿಲಲ್ಲಿ ಶ್ರೀ ಪೇಟೆ ಹನುಮಂತ ದೇವರ , ಪುರುಷ ಗಾತ್ರದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದರು. ರಾಜರ ಆಳ್ವಿಕೆ ಕೊನೆಗೊಂಡ ನಂತರ. ಬ್ರಿಟೀಶರ ಆಳ್ವಕೆಯಲ್ಲಿ ಸೋಂದಾ ಕೋಟೆಯನ್ನು ಒಂದು ಸ್ಮಾರಕ ಎಂದು ಘೋಷಣೆ ಮಾಡಿದರೆ ಹೊರತು ಯಾವುದೇ ಅಭಿವೃದ್ದಿ ಮಾಡಿರಲಿಲ್ಲ. ಇದರಿಂದ ಕೋಟೆಯ ಹೊರಭಾಗದಲ್ಲಿರುವ ಹನುಮಂತ ದೇವಸ್ಥಾನವೂ ನಿರ್ಲಕ್ಷö್ಯಗೊಳಗಾಗಿತ್ತು. ಆದರೆ ೧೯೮೭ರಲ್ಲಿ ಕೋಟೆಯ ಸನೀಹದಲ್ಲಿರುವ ಮಜರೆಗಳ ನಾಗರಿಕರು ಸ್ವಯಂ ಪ್ರೇರಣೆಯಿಂದ, ಜನ-ಜಾನುವಾರು–ಮೀನುಗಳ ರಕ್ಷಣೆಗಾಗಿ ಪುನಃ ಪೂಜೆಯನ್ನು ಪ್ರಾರಂಭಿಸಿದರು. ಅಂದಿನಿAದ ಪ್ರತಿವರ್ಷ ಕಾರ್ತೀಕ ಮಾಸದ ಕೃಷ್ಣ ಪರ್ಕ್ಷದ ಕೊನೆ ಶನಿವಾರ ಶ್ರೀ ಆಂಜನೇಯನಿಗೆ ದೀಪೋತ್ಸವ ನೆರವೇರಿಸುತ್ತಾ ಬಂದರು.
ಕಳೆದ ಶನಿವಾರ ೧೫-೧೧-೨೦೨೫ ಮುಂಜಾನೆ ಶ್ರೀ ದೇವರಿಗೆ ಕ್ಷೀರಾಭಿಷೆಕದೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭಗೊAಡು ಸಂಜೆ ೬-೩೦ಕ್ಕೆ ಮಾತೆಯರಿಂದ ಭಜನಾಸೇವೆ ಸಲ್ಲಿಸುವದರೊಂದಿಗೆ ದೀಪೋತ್ಸವವನ್ನು ವಿಜೃಂಭಣೆಯಿAದ ನೇರವೇರಿಸಲಾಯಿತು ಹಾಗೂ ಸನೀಹದಲ್ಲಿರುವ ವ್ಯಾಗ್ರರಾಜನಿಗೂ ಪೂಜೆ-ದೀಪೋತ್ಸವ ಕೈಗೊಳ್ಳಲಾಯಿತು.
ಧಾರ್ಮಿಕ ಕಾರ್ಯವನ್ನು ಶ್ರೀ ಮಹಾಭಲೇಶ್ವರ ಜೋಶಿ ಸಂಪೇಸರ ನಡೆಸಿಕೊಟ್ಟರು. ಭಾಸ್ಕರ ಹೆಗಡೆ ಉಳಿಕೊಪ್ಪ ಸಹಕರಿಸಿದರು. ಮಾತೆಯರು ಅತ್ಯಾಕರ್ಷಕ ರಂಗೋಲಿ ಹಾಕಿದ್ದರೆ, ಗಣಪತಿ ಪಟಗಾರ ಮಾರ್ಗದರ್ಶನದಲ್ಲಿ ಜೈ ಮಾರುತಿ ಸಂಘ ಸೋಂದಾ ಕ್ರಾಸ್ ಕೋಟೆ ಇವರು ದೇವಳಕ್ಕೆ ತಳಿರು ತೋರಣ ಕಟ್ಟಿ ಹೂವಿನ ಅಲಂಕಾರ ಹಾಗೂ ದೀಪೋತ್ಸವದ ಸಂಪೂರ್ಣ ವ್ಯವಸ್ಥೆ ನಿರ್ವಹಿಸಿದರು. ಈ ವೇಳೆ ಸೋಂದಾ ಜಾಗೃತ ವೇದಿಕೆ ಕಾರ್ಯದರ್ಶಿ ಶ್ರೀ ಶ್ರೀಧರ ಹೆಗಡೆ ಗುಡ್ಡೆಮನೆ, ಕೋಶಾಧ್ಯಕ್ಷ ರಮೇಶ ಸ್ವರ್ಣವಲ್ಲೀ ಸದಸ್ಯರಾದ ರಾಮಚಂದ್ರ ಹೆಗಡೆ ಉಳ್ಳಿಕೊಪ್ಪ ಬಾಲಚಂದ್ರ ಭಟ್ಟ ಬಸವನಕೊಪ್ಪ ಹಾಗೂ ಊರನಾಗರಿಕ ಬಂದು-ಭಗಿನೀಯರು ದೀಪೋತ್ಸವದಲ್ಲಿ ಸಂಭ್ರಮದಿAದಾ ಪಾಲ್ಗೋಂಡಿದ್ದರು.