ತುಡುಗುಣಿಯಲ್ಲಿ ಬೇಟೆಗಾರರ ಗುಂಡಿಗೆ ಜಿಂಕೆ ಬಲಿ

ಆಪ್ತ ನ್ಯೂಸ್ ಯಲ್ಲಾಪುರ:
ಯಲ್ಲಾಪುರ ತಾಲೂಕಿನ ವ್ಯಾಪ್ತಿಗೆ ಒಳಪಡುವ ಮಂಚಿಕೇರಿ ವಲಯ ಅರಣ್ಯ ಇಲಾಖೆ ಸರಹದ್ದಿನ ಶಿರಸಿ -ಯಲ್ಲಾಪುರ ರಸ್ತೆ ತುಡುಗುಣಿಯಲ್ಲಿ ಕಾಡುಪ್ರಾಣಿ ಬೇಟೆಗಾರ ದುಷ್ಕರ್ಮಿಗಳು ಜಿಂಕೆಯೊಂದನ್ನು ಹತ್ಯೆ ಮಾಡಿರುವ ಬಗ್ಗೆ ವರದಿಯಾಗಿದೆ.
ದುಷ್ಕರ್ಮಿಗಳು ತುಡುಗುಣಿ ಸೇತುವೆ ಸಮೀಪದ ಕಾಡಿನಲ್ಲಿ ಬಂದೂಕಿನಿಂದ ಗುಂಡು ಹಾರಿಸಿ , ಜಿಂಕೆಯನ್ನು ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ.
ಜಿಂಕೆಯನ್ನು ಹತ್ಯೆ ಮಾಡಲಾಗಿದ್ದು, ಹತ್ತಿರದ ನಿವಾಸಿಗಳು ಸದ್ದು ಕೇಳಿ ಬ್ಯಾಟರಿ ಬೆಳಕು ಬಿಟ್ಟಾಗ ಜಿಂಕೆಯನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮಂಚಿಕೆರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ತನಿಖೆ ಕೈಗೊಂಡಿದ್ದಾರೆ.
What's Your Reaction?






