ಗೋಳಿಕೈ ಗಿಡ ನಾಶ - ನೀತಿ, ಕ್ರಮ, ಉಲ್ಲಂಘನೆ: ದೌಜನ್ಯ ನಿಯಂತ್ರಣಕ್ಕೆ ಆಗ್ರಹ - ರವೀಂದ್ರ ನಾಯ್ಕ
ಆಪ್ತ ನ್ಯೂಸ್ ಸಿದ್ದಾಪುರ:
ಬಿಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಕೈಯಲ್ಲಿ ಅನಾದಿಕಾಲದದಿಂದ ಸಾಗುವಳಿ ಮಾಡುತ್ತೀರುವ ಕ್ಷೇತ್ರದಲ್ಲಿನ ಗಿಡ ನಾಶ ಪಡಿಸಿರುವ ನೀತಿ ಮತ್ತು ಕ್ರಮ ಕಾನೂನು ಉಲ್ಲಂಘನೆಯಾಗಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿನ ಅರ್ಜಿ ಪರಿಶೀಲಿಸದೇ ಸ್ಥಳ ಪರಿಶೀಲನೆ ಜರುಗಿಸದೇ ಒಕ್ಕಲೆಬ್ಬಿಸುವ ಪ್ರಕ್ರಿಯೆ ಕಾನೂನಿಗೆ ಮೀರಿ ಜರುಗಿಸಿದ ಕ್ರಮವನ್ನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿಯಲ್ಲಿನ ಸಾಗುವಳಿ ಕ್ಷೇತ್ರಕ್ಕೆ ನೂರಕ್ಕೂ ಮಿಕ್ಕಿ ಅಡಕೆ ಗಿಡ ಕಡಿದಿರುವ ಬಿಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಕೈ ಗ್ರಾಮದ ನಿವಾಸಿ ಗಣೇಶ ವೆಂಕಟರಮಣ ಹೆಗಡೆಯವರು ಅರಣ್ಯ ಸಿಬ್ಬಂಧಿಗಳು ನಾಶಪಡಿಸಿದ ಸ್ಥಳವನ್ನ ಪರಿಶೀಲಿಸಿದ ನಂತರ ಮೇಲಿನಂತೆ ಹೇಳಿದರು.
ಅರಣ್ಯವಾಸಿ ಕುಟುಂಬವು ಅನಾದಿಕಾಲದಿಂದ ಸಾಗುವಳಿ ಮಾಡುತ್ತಿದ್ದು, ೧೯೯೮ರಲ್ಲಿ ಅರಣ್ಯವಾಸಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅದರಂತೆ ಜಿಪಿಎಸ್ ಸರ್ವೆ ಮೂಲಕ ಅತಿಕ್ರಮಣ ದೃಡಪಡಿಸಿಕೊಂಡಿದ್ದು ಇರುತ್ತದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಗಣೇಶ ವೆಂಕಟರಮಣ ಹೆಗಡೆ ಅರ್ಜಿ ಸಲ್ಲಿಸಿದ ಕುರಿತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಐಡಿ ನಂ ಸಹಿತ ದಾಖಲೆ ಇರುವುದು ಕಂಡುಬರುತ್ತದೆ. ಕುಟುಂಬ ವರ್ಗದ ಕಂದಾಯ ಭೂಮಿಯ ಲಗ್ತ ಇರುವ ಅರಣ್ಯ ಅತಿಕ್ರಮಣ ಕ್ಷೇತ್ರದ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ಜರುಗಿಸದೇ ಒಕ್ಕಲೆಬ್ಬಿಸುವ ಪ್ರಕ್ರಿಯಾ ವಿಧಿ ವಿಧಾನ ಕ್ರಮ ಜರುಗಿಸಿದ್ದು ಇರುವುದಿಲ್ಲ ಅಲ್ಲದೇ, ಒಕ್ಕಜಲೆಬ್ಬಿಸುವ ಸುಪ್ರಿಂ ಕೊರ್ಟ ನಿರ್ದೇಶನದ ಮಾನದಂಡ ಪಾಲಿಸಿದ್ದು ಇರುವುದಿಲ್ಲ ಎಂದು ಅವರು ಹೇಳುತ್ತಾ, ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಮಾಹಿತಿ ನೀಡದೇ ಮಹಿಳೆಯರಿದ್ದಾಗ ಬೆಳೆದಂತ ಗಿಡವನ್ನು ನಾಶಪಡಿಸಿರುವುದು ಅರಣ್ಯ ಸಿಬ್ಬಂಧಿಗಳ ಕೃತ್ಯವನ್ನು ಅಮಾನವೀಯ ಅವರು ಹೇಳಿದ್ದಾರೆ.
ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಚಂದ್ರ ಶಾನಭಾಗ ಬಂಡಲ್, ರಾಘು ಕವಂಚೂರು, ದಿನೇಶ ನಾಯ್ಕ ಬೇಡ್ಕಣಿ, ಬಾಬು ಮರಾಠಿ, ಯಶವಂತ ನಾಯ್ಕ ಬಂಡಲ್, ಜಗದೀಶ ಶಿರಳಗಿ, ಸಂಕೇತ ನಾಯ್ಕ, ತಿಮ್ಮಪ್ಪ ನಾಯ್ಕ, ಸುಧಾಕರ್ ಮಡಿವಾಳ, ಶೇಖರ್ ನಾಯ್ಕ, ವಾಸು ನಾಯ್ಕ ಹಂಜಗಿ, ಲಕ್ಷö್ಮಣ ನಾಯ್ಕ, ಮುಂತಾದವರು ಉಪಸ್ಥತಿರಿದ್ದರು.
ಅರಣ್ಯ ಸಚಿವರ ಒತ್ತಡ:
ಮುಂಬರುವ ಮಾರ್ಚ ಅಂತ್ಯದ ಒಳಗೆ ಉತ್ತರಕನ್ನಡ ಜಿಲ್ಲೆಯಲ್ಲಿ ೧೪೫೦ ಎಕರೆ ಸಾಗುವಳಿ ಕ್ಷೇತ್ರವನ್ನ ಒಕ್ಕಲೆಬ್ಬಿಸಬೇಕೆಂಬ ಆದೇಶ ಮತ್ತು ಒತ್ತಡÀ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿAದ ಕಿರುಕುಳ ಮತ್ತು ದೌರ್ಜನ್ಯ ಜರುಗುತ್ತಿದೆ. ಅರಣ್ಯವಾಸಿಗಳ ಇಂತಹ ಕೃತ್ಯವನ್ನ ನಿಯಂತ್ರಿಸುವುದು ಅವಶ್ಯ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಾನೂನು ಉಲ್ಲಂಘನೆ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿ ಪುನರ್ ಪರಿಶೀಲನೆ ಆಗುವವರೆಗೂ ಒಕ್ಕಲೆಬ್ಬಿಸಬಾರದು ಎಂಬ ಕಾನೂನಿನ ಅಂಶ ಹಾಗೂ ಇನ್ನಿತರ ಯಾವುದೇ ಕಾನೂನಿನ ಅಡಿಯಲ್ಲಿ ಯಾವುದೇ ನೀತಿ ನಿಯಮ ಇದ್ದರೂ ಸಹಿತ, ಅರಣ್ಯ ಹಕ್ಕು ಕಾಯಿದೆಯ ನಿಯಮಾವಳಿ ಅಂತಿಮ ಎಂಬ ಅಂಶವನ್ನು ಅರಣ್ಯ ಸಿಬ್ಬಂದಿಗಳು ಕಡೆಗಣಿಸಿದ್ದಾರೆ ಎಂದು ಅವರು ಅರಣ್ಯ ಇಲಾಖೆಯ ವಿರುದ್ದ ಆರೋಪಿಸಿದರು.
What's Your Reaction?
Like
0
Dislike
1
Love
0
Funny
0
Angry
0
Sad
1
Wow
0



