ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಲಾಂಛನ ಬಿಡುಗಡೆ

Nov 19, 2025 - 11:17
 0  15
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಲಾಂಛನ ಬಿಡುಗಡೆ

ಆಪ್ತ ನ್ಯೂಸ್‌ ದಾಂಡೇಲಿ:

ಮುಂಬರುವ ಡಿಸೆಂಬರ್ 13 , 14, 15ರಂದು ದಾಂಡೇಲಿಯಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ದಾಂಡೇಲಿಯ ಆಡಳಿತ ಸೌಧದ ಸಭಾಭವನದಲ್ಲಿ ಮಂಗಳವಾರ ನಡೆಯಿತು. 
ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಇದು 25ನೇ ವರ್ಷದ ಸಮ್ಮೇಳನ ವಾಗಿದ್ದರಿಂದ ರಜತ ಮಹೋತ್ಸವದ ಸಂಭ್ರಮ ನಮ್ಮೆಲ್ಲರಲ್ಲಿಯೂ ಇರಬೇಕು. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಪ್ರತಿಯೊಂದು ಮನೆ, ಮನಗಳಲ್ಲಿ ಹಬ್ಬದೋಪಾದಿಯಲ್ಲಿ ನಡೆಯಬೇಕು. ಪ್ರತಿಯೊಬ್ಬರೂ ಕೂಡ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್ . ವಾಸರೆ ಮಾತನಾಡಿ ಸಮ್ಮೇಳನದ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ದಾಂಡೇಲಿಯ ಸರ್ವ ಜನತೆ ಸಮ್ಮೇಳನದ ಯಶಸ್ವಿಗಾಗಿ ಸಹಕಾರ ತೋರುತ್ತಿದ್ದಾರೆ. 25ನೇ ವರ್ಷದ ಸಮ್ಮೇಳನ ವಾಗಿದ್ದರಿಂದ ಇದು ದಾಂಡೇಲಿಯ ಒಂದು ಐತಿಹಾಸಿಕ ಕಾರ್ಯಕ್ರಮವಾಗಿ ದಾಖಲಾಗಿದೆ ಎಂದರು. 
ನಗರಸಭಾ ಅಧ್ಯಕ್ಷ  ಅಷ್ಪಾಕ್ ಶೇಖ್ ಮಾತನಾಡಿ 25ನೇ ವರ್ಷದ ಸಾಹಿತ್ಯ ಸಮ್ಮೇಳನ ದಾಂಡೇಲಿ ಗೆ ಆತಿೃಥ್ಯ ವಹಿಸಲಿ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಅದೃಷ್ಟವಾಗಿದೆ  ಎಂದರು. ತಾಲೂಕು ಪಂಚಾಯತ್ ಕಾರ್ಯ ನಿರ್ವಾಣ ಅಧಿಕಾರಿ ಟಿ.ಸಿ. ಹಾದಿಮನಿ ಪ್ರಾಸ್ತಾವಿಕವಾಗಿ  ಮಾತನಾಡಿದರು. 

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ್ ' ಕರ್ನಾಟಕ ಸಂಘದ ಉಪಾಧ್ಯಕ್ಷ ರಾಜೇಶ ತಿವಾರಿ'  ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕ ಟಿ.ಎಸ್. ಬಾಲಮಣಿ, ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಎಸ್. ಪ್ರಕಾಶ್ ಶೆಟ್ಟಿ,  ಕಸಾಪ ಕೋಶಾಧ್ಯಕ್ಷ ಶ್ರೀಮಂತ ಮದರಿ, ಪದಾಧಿಕಾರಿಗಳಾದ ಕಲ್ಪನಾ ಪಾಟೀಲ್ , ಸುರೇಶ್ ಕಾಮತ್, ವೆಂಕಮ್ಮ ನಾಯಕ್, ಸುರೇಶ್ ಪಾಲನಕರ್,   ಮುಂತಾದವರು ಉಪಸ್ಥಿತರಿದ್ದರು. 

ಜಿಲ್ಲೆಯ ಹಿರಿಮೆಯನ್ನೊಳಗೊಂಡ ಲಾಂಛನ
ಕಲಾವಿದ ಮಹೇಶ ಪತ್ತಾರ  ಸಿದ್ದಪಡಿಸಿದ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ದಾಂಡೇಲಿಯ ಅಭಯಾರಣ್ಯ, ಕಾಗದ ಕಂಪನಿ,  ಇಲ್ಲಿಯ  ಗುರುತುಗಳಾದ  ಹಾರ್ನಬಿಲ್ , ಹುಲಿ,  ಕಾಳಿನದಿ, ರಾಪ್ಟಿಂಗ್, ಜಿಲ್ಲೆಯ ಹೆಮ್ಮೆಯ ಕಲೆ ಯಕ್ಷಗಾನ, ಜಲಪಾತ  ಸೇರಿದಂತೆ ಹಲವು ಸಂಗತಿಗಳ ಜೊತೆಗೆ ಇಡೀ ಜಿಲ್ಲೆಯ ಸಾಂಸ್ಕೃತಿಕ ಪ್ರಾಕೃತಿಕ ಭೌಗೋಳಿಕ ಸೊಬಗನ್ನ ಒಳಗೊಂಡಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0