ಡಾ.ಮಹಾಬಲ ರಾವ್ ಕೆ ಇನ್ನಿಲ್ಲ

ಆಪ್ತ ನ್ಯೂಸ್ ಶಿರಸಿ:
ಸರಕಾರಿ ಆಸ್ಪತ್ರೆಯ ನಿವೃತ್ತ ವೈದ್ಯರಾಗಿದ್ದ, ಶಿರಸಿ ತಾಲೂಕಿನ ಕೆರೆಕೊಪ್ಪ ಗ್ರಾಮದ ಡಾ.ಮಹಾಬಲ ರಾವ್ ಕೆ (ರೈಸದ್ 80) ಇವರು ಇಂದು (ಅ,14) ಬೆಳಿಗ್ಗೆ ಕೊಲ್ಲಾಪುರದಲ್ಲಿ ಹೃದಯಾಘಾತದಿಂದ ನಿಧನರಾದರು.ಮೃತರು ಪತ್ನಿ,ಈರ್ವರು ಪುತ್ರರು ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ.
ನಿಸ್ವಾರ್ಥ ಸೇವೆಯ ವೈದ್ಯರಾಗಿದ್ದ ಡಾ.ಮಹಾಬಲ್ ಇವರು ತನ್ನ ಮಗನ ಮನೆಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದರೆಂದು ತಿಳಿದು ಬಂದಿದೆ. ಡಾ.ರೈಸದ್ ಇವರು ನಿವೃತ್ತಿ ಬಳಿಕ ಶಿರಸಿ ಮರಾಠಿಕೊಪ್ಪದಲ್ಲಿ ಆನಂದ ಕ್ಲಿನಿಕ್ ನಡೆಸುತ್ತಿದ್ದರು. ಮೃತರು ಸರಕಾರಿ ಆಸ್ಪತ್ರೆಯ ವೈದ್ಯರಾಗಿ ಹೆಗಡೆಕಟ್ಟಾ, ಗೋಕರ್ಣ, ಬಂಕಿಕೊಡ್ಲು ಸೇರಿದಂತೆ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು.
What's Your Reaction?






