ಶರಾವತಿ ಕೊಳ್ಳವು ಯಕ್ಷಗಾನದ ವಿಸ್ತಾರಕ್ಕೆ ವಿಶೇಷ ಕೊಡುಗೆ ನೀಡಿದೆ: ಡಾ.ಶಂಕರಶಾಸ್ತ್ರೀ
ಆಪ್ತ ನ್ಯೂಸ್ ಸಾಗರ:
ಯಕ್ಷಗಾನದ ಸೀಮೆಯನ್ನು ನದಿಗಳ ಮೂಲಕ ಹೇಳುವ ಕ್ರಮವಿದೆ. ಅದನ್ನು ಗಮನಿಸಿದಾಗ ಶರಾವತಿ ಕೊಳ್ಳವು ಯಕ್ಷಗಾನದ ವಿಸ್ತಾರಕ್ಕೆ ವಿಶೇಷ ಕೊಡುಗೆ ನೀಡಿದೆ ಎಂದು ಯಕ್ಷ ಸಂಶೋಧಕ ಡಾ.ಶಂಕರಶಾಸ್ತ್ರೀ ಹೇಳಿದರು.
ನಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಶ್ರೀರಾಜರಾಜೇಶ್ವರಿ ಕೃಪಾಪೋಷಿತ ಯಕ್ಷ ಮೇಳ ಗುಂಡೂಮನೆಯವರು ಏರ್ಪಡಿಸಿದ್ದ ವಿಜಯ ಸರಣಿ ತಾಳಮದ್ದಲೆಯ ಸಮಾರೋಪದಲ್ಲಿ ಲೋಕಾರ್ಪಣೆಗೊಂಡ ರಮೇಶ್ ಹೆಗಡೆ ಗುಂಡೂಮನೆ ವಿರಚಿತ ಶ್ರೀಲಲಿತಾದೇವಿ ವಿಜಯ ಯಕ್ಷ ಕೃತಿಯ ಕುರಿತು ಅವರು ಮಾತನಾಡಿದರು.
ಸ್ಥಿರಾಂಶ, ತಲೆಮಾರು ಎನ್ನುವ ಎರಡು ಚರಾಂಶಗಳಿAದಲೇ ಯಕ್ಷಗಾನದ ಚರಿತ್ರೆ ರೂಪಿತವಾಗುವುದು. ಯಕ್ಷಗಾನದಿಂದ ವಂಶವಾಹಿನಿಯನ್ನು ಪ್ರತ್ಯೇಕವಾಗಿ ಗಮನಿಸಲು ಹೋದರೆ ಯಕ್ಷಗಾನ ತನ್ನದೇ ಒಂದು ಭಾಗವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಯಕ್ಷಗಾನದಲ್ಲಿ ವಂಶಗಳು ಹಾಸುಹೊಕ್ಕಾಗಿರುವುದನ್ನು ನಾವೆಲ್ಲ ಕಾಣಬಹುದಾಗಿದೆ. ಗುಂಡೂಮನೆ ಕುಟುಂಬ 10ತಲೆಮಾರಿನಿಂದ ಯಕ್ಷಗಾನ ರೂಢಿಸಿಕೊಂಡು ಬಂದಿರುವುದು ಬೆಳಕಿಗೆ ಬಂದಿದ್ದು, ಇದೀಗ 11ನೇ ತಲೆಮಾರಿಗೆ ಹಸ್ತಾಂತರಗೊಳ್ಳುತ್ತಿರುವುದು ನಿಜಕ್ಕೂ ವಿಶೇಷ ಸಂಗತಿ ಎಂದರು.
ಸAಸ್ಕೃತ ಉಪನ್ಯಾಸಕ ವಿದ್ವಾನ್ ಗಜಾನನ ಭಟ್ ರೇವಣಕಟ್ಟಾ ಮಾತನಾಡಿ, ಯಕ್ಷಗಾನದಲ್ಲಿ ಅಲ್ಲಿಯ ಕವಿಯ ಹೃದಯ ಪಾತ್ರಧಾರಿಗಳಿಂದ ವ್ಯಕ್ತವಾದಾಗ ಮಾತ್ರ ನೈಜ ಕಲೆಯಾಗುತ್ತದೆ. ಅದನ್ನು ಹೊರತುಪಡಿಸಿ ವಿಮರ್ಶೆ, ವಿತ್ತಂಡವಾದಕ್ಕೆ ಮುಂದುವರಿದರೆ ಅದು ಕಲೆಯಾಗಿ ಉಳಿಯುವುದಿಲ್ಲ ಎಂದರು.
ವAಶವಾಹಿನಿಯ ೧೦ನೇ ತಲೆಮಾರಿನ ಸಂಜನಾ ಆರ್. ಹೆಗಡೆ ಗುಂಡೂಮನೆ ಕೃತಿ ಬಿಡುಗಡೆಗೊಳಿಸಿ ೧೧ನೇ ತಲೆಮಾರಿನ ಚಂದನಾ ಗುಂಡೂಮನೆಯವರಿಗೆ ಹಸ್ತಾಂತರಿಸಿದರು. ಯುವ ಭಾಗವತ ಸೃಜನ್ ಗಣೇಶ್ ಹೆಗಡೆ, ಸೂರ್ಯನಾರಾಯಣ ಹೆಗಡೆ ಇದ್ದರು. ಪೋಷಕ ಬಿ.ಎಸ್. ಕೃಷ್ಣ ಬಣ್ಣೂಮನೆ ಅಧ್ಯಕ್ಷತೆ ವಹಿಸಿದ್ದರು.
ನಂತರ ಶ್ರೀಲಲಿತಾದೇವಿ ವಿಜಯ ತಾಳಮದ್ದಲೆ ಹಾಗೂ ಸರಣಿ ತಾಳಮದ್ದಲೆ ಸಮಾರೋಪ ಕಲಾಭಿವಂದನೆ ಜರುಗಿತು. ಗಣಪತಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಆರ್. ಶ್ರೀನಿವಾಸ, ಹವ್ಯಕ ಒಕ್ಕೂಟದ ಅಧ್ಯಕ್ಷ ಕೆ.ಆರ್. ಗಣೇಶ್ ಪ್ರಸಾದ್ ಮಾತನಾಡಿದರು. ಕಲಾವಿದರಾದ ಅರುಣ್ ಬೆಂಕಟವಳ್ಳಿ, ರವಿಶಂಕರ ಭಟ್, ಅಶೋಕ ಕುಮಾರ್, ಶರತ್ ಜಾನಕೈ, ಶ್ರೀವತ್ಸ, ಸ್ವರೂಪರನ್ನು ಅಭಿನಂದಿಸಲಾಯಿತು. ವಿದ್ವಾನ್ ಜನಾರ್ಧನ, ಕಲ್ಪನಾ ತಲವಾಟ, ದತ್ತಾತ್ರೇಯ ಭಟ್, ಶ್ರೀಧರ ಹೆಗಡೆ ಮತ್ತಿತರರು ಇದ್ದರು.
(ವಂಶವಾಹಿನಿಯ ಸರಣಿ ತಾಳಮದ್ದಲೆಯ ಸಮಾರೋಪದಲ್ಲಿ ಕಲಾವಿದರನ್ನು ಗೌರವಿಸಲಾಯಿತು)
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



