ಶಿರಸಿಯಲ್ಲಿ ಬೆಳ್ಳoಬೆಳಗ್ಗೆ ಬೆಂಕಿ ಅನಾಹುತ: ಅಂಗಡಿ ಭಸ್ಮ
ಆಪ್ತ ನ್ಯೂಸ್ ಶಿರಸಿ:
ನಗರದ ನಟರಾಜ ರಸ್ತೆಯಲ್ಲಿರುವ ಅಂಗಡಿಯೊಒಂದರಲ್ಲಿ ಬೆಳ್ಳಂಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಇಂದ ಬೆಂಕಿ ತಗುಲಿ ಅಂಗಡಿಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ರಶೀದ್ ಖಾನ್ ಮುಲ್ಲಾ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿ ಆಗಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ಬೆಳಗಿನ ಪ್ರಾರ್ಥನೆ ಹೋಗುವವರು ಕಂಡ ನಂತರ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿದೆ. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯರ ಜೊತೆಗೂಡಿ ಬೆಂಕಿ ನoದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇಡೀ ಅಂಗಡಿ ಸುಟ್ಟು ಭಸ್ಮವಾಗಿದೆ.
ಹಾನಗಲ್ ನಿವಾಸಿ ಮಾಲೀಕರಾದ ರಶೀದ್ ಖಾನ್ ಮುಲ್ಲಾ ಹೇಳುವ ಪ್ರಕಾರ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯ ಶಟರ್ಸ್ ಸಮೇತ ಪೀಠೋಪಕರಣಗಳು -ಹೊಸ ಮೊಬೈಲ್ ಗಳು ಸುಟ್ಟು ಕರಕಲಾಗಿವೆ. ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಸ್ಥಳದಲ್ಲಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
1
Sad
1
Wow
0



