ಶಿರಸಿ ಕೋಟೆಕೆರೆಗೆ ಹಾರಿದ ವೃದ್ಧ

ಆಪ್ತ ನ್ಯೂಸ್ ಶಿರಸಿ:
ಶಿರಸಿ ಕೋಟೆಕೆರೆಗೆ ವೃದ್ಧನೊಬ್ಬ ಹಾರಿದ್ದು, ಆತನನ್ನು ನೀರಿನಿಂದ ಹೊರಕ್ಕೆ ತೆಗೆಯಲಾಗಿದೆ. ಘಟನೆ ಈಗಷ್ಟೇ ನಡೆದಿದ್ದು ಮುಳುಗು ತಜ್ಞ ಗೋಪಾಲ ಗೌಡ, NMPS ಪಿಎಸ್ಐ ಬಸವರಾಜ ಕನಶೆಟ್ಟಿ ಹಾಗೂ ಅಗ್ನಿಶಾಮಕದಳ ಸ್ಥಳದಲ್ಲಿದ್ದು ಕಾರ್ಯಾಚರಣೆ ನಡೆಸಿರುವ ಕುರಿತು ವರದಿಯಾಗಿದೆ.
ಮುಳುಗು ತಜ್ಞ ಗೋಪಾಲಗೌಡ ಕೆರೆಗೆ ಬಿದ್ದ ವ್ಯಕ್ತಿಯನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.ವ್ಯಕ್ತಿ ಉಸಿರಾಡುತ್ತಿದ್ದು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.
What's Your Reaction?






