ಶಿಕ್ಷಕ ಸತೀಶ ಯಲ್ಲಾಪುರರಿಗೆ ಬೀಳ್ಕೊಡುಗೆ
ಆಪ್ತ ನ್ಯೂಸ್ ಯಲ್ಲಾಪುರ:
ವಿವಿಧ ಪ್ರೌಢಶಾಲೆಗಳಲ್ಲಿ ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕಿರವತ್ತಿಯ ಕರ್ನಾಟಕ ಪಬ್ಲಿಕ ಸ್ಕೂಲ್ ನಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ಸತೀಶ ಯಲ್ಲಾಪುರ ಅವರನ್ನು ಪಬ್ಲಿಕ್ ಸ್ಕೂಲ್ ಕಿರವತ್ತಿಯ ಆಶ್ರಯದಲ್ಲಿ ಶುಕ್ರವಾರ ಅಭಿನಂದಿಸಿ ಬೀಳ್ಕೊಡಲಾಯಿತು.
ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಿಕ್ಷಕ ಸಮೂಹ, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳವರು, ಪ್ರಮುಖರು ನಿವೃತ್ತಿಗೊಂಡ ಕಲಾ ಶಿಕ್ಷಕ ಸತೀಶ ಯಲ್ಲಾಪುರರವರನ್ನು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿದ ಸತೀಶ ಯಲ್ಲಾಪುರ ಮಾತನಾಡಿ, ಕಷ್ಟಗಳು ಮತ್ತು ಪ್ರಯತ್ನ ಮನುಷ್ಯನ ಯಶಸ್ಸಿಗೆ ಕಾರಣವಾಗುತ್ತದೆ. ಮಕ್ಕಳು ಕಷ್ಟಪಟ್ಟು ಓದಬೇಕು. ಕಷ್ಟದ ಅರಿವೂ ಆಗಬೇಕು ಆಗ ಸವಾಲುಗಳನ್ನು ಎದುರಿಸುತ್ತೀರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಅವರ ಒಡನಾಡಿ ಶಿಕ್ಷಕರಾದ ಸುಧೀರ ಡಿ ನಾಯಕ, ಸದಾನಂದ ದಬ್ಗಾರ್, ಅಜೇಯ ನಾಯಕ್, ನಿವೃತ್ತ ಶಿಕ್ಷಕ ವಿನೋದ ನಾಯ್ಕ್, ಎಂ.ಆರ್.ನಾಯ್ಕ್, ಸುದರ್ಶನ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ, ರಿಪೋಸ್ ಉದ್ಯಮಿ ರಾಮನಾಥ ಭಟ್ಟ ಅಡ್ಕೆಪಾಲ್, ಪತ್ರಕರ್ತ ನರಸಿಂಹ ಸಾತೊಡ್ಡಿ, ಬಿಇಓ ರೇಖಾ ನಾಯ್ಕ್, ಎಸ್.ಡಿ.ಎಂಸಿಯ ಸದಸ್ಯ ಮಂಜುನಾಥ ಮರಾಠಿ, ಪಬ್ಲಿಕ ಸ್ಕೂಲ್ ಶಿಕ್ಷಕ ರಾಘವೇಂದ್ರ ಅಭಿನಂದಿಸಿ ಮಾತನಾಡಿದರು.
ಶಿಕ್ಷಣ ಇಲಾಖೆಯ ಎಸ್.ಎಸ್, ಜಿಗಳೂರು, ಪ್ರಶಾಂತ ಜಿ.ಎನ್, ಆರ್.ಜಿ.ಭಟ್ಟ ಬಿಸ್ಗೋಡ, ವಾಣಿ ಸತೀಶ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ನಾರಾಯಣ ಜಗದಾಳ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಜನಾರ್ಧನ ಗಾಂವ್ಕಾರ್ ಸ್ವಾಗತಿಸಿ ಪ್ರಾಸ್ತಾವಿಕಗೈದರು. ಸಹಶಿಕ್ಷಕಿ ಸೀಮಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಹಶಿಕ್ಷಕ ನಾಗರಾಜ ನಾಯ್ಕ ವಂದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



