ಸೇವಾ ನಿವೃತ್ತಿ ಹೊಂದಿದ ಜನಾನುರಾಗಿ ಪಶು ವೈದ್ಯ ಡಾ. ಎಂ ಎಂ‌‌ ಹೆಗಡೆ ಅವರಿಗೆ ಸನ್ಮಾನ

Nov 6, 2025 - 12:46
 0  97
ಸೇವಾ ನಿವೃತ್ತಿ ಹೊಂದಿದ ಜನಾನುರಾಗಿ ಪಶು ವೈದ್ಯ ಡಾ. ಎಂ ಎಂ‌‌ ಹೆಗಡೆ ಅವರಿಗೆ ಸನ್ಮಾನ

ಆಪ್ತ ನ್ಯೂಸ್ ರಾಮನಗುಳಿ:

ಸುದೀರ್ಘ ಕಾಲ ಹಳವಳ್ಳಿಯ ಪಶು ಆಸ್ಪತ್ರೆಯ ವೈದ್ಯರಾಗಿ, ಅಂಕೋಲಾ ತಾಲೂಕಿನ ಪಶು ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಮಹಾಬಲೇಶ್ವರ ಮಾ ಹೆಗಡೆ (ಡಾ. ಎಂ ಎಂ‌‌ ಹೆಗಡೆ) ಯವರಿಗೆ ಹಳವಳ್ಳಿ ಹಾಲು ಉತ್ಪಾದಕರ ಸಂಘ ಹಾಗೂ ಊರನಾಗರಿಕರ ಆಶ್ರಯದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಭಾವನಾತ್ಮಕವಾಗಿ ಹಳವಳ್ಳಿ ಹಾಗೂ ತನ್ನ ಸಂಬಂದವನ್ನು ವಿವರಿಸಿದರು. 30 ವರ್ಷದ ಹಿಂದೆ ಹಳವಳ್ಳಿಗೆ ಬಂದಾಗಿನ ಪರಿಸ್ತಿತಿ ಹಾಗೂ ಸಹಕರಿಸಿದ ಪ್ರತಿಯೊಬ್ಬರನ್ನು ನೆನೆನಪು ಮಾಡಿಕೊಂಡರು. ಅವರು ಮಾತಿನಲ್ಲಿಯೇ 90ರ ದಶಕಕ್ಕೆ ಎಲ್ಲರನ್ನು ಕರೆದುಕೊಂಡು ಹೋಗಿದ್ದರು ಆಗಿನ ಕಾಲದ ದಿನವನ್ನು ನೆನೆದರು. 

ಊರವರ ಪರವಾಗಿ ಕೃಷಿಕರಾದ ಎಸ್ ಎಂ ಹೆಗಡೆಯವರು ಮಾತನಾಡಿ ಎಂ ಎಂ ಹೆಗಡೆಯವರ ಸಂಸ್ಕಾರ, ಅವರ ಹಾಗೂ ಜನರ ಆತ್ಮಿಯತೆ, ಅವರ ಮೃದು ಸ್ವಭಾವದ ಬಗ್ಗೆ ಮಾತನಾಡಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಪ್ರಭಾಕರ ಹೆಗಡೆಯವರು ಹೆಗಡೆಯವರು ನಿವೃತ್ತಿ ಹೊಂದಿದ ಸಮಯದಲ್ಲಿ ಅವರು ಕಾಶಿಯಾತ್ರೆಗೆ ತೆರಳಿದ ಕಾರಣ ಅವರ ಸನ್ಮಾನದ ಬಿಳ್ಕೊಡುಗೆಗೆ ವಿಳಂಬವಾಯಿತು. ಡಾಕ್ಟರು ರಾತ್ರಿ ಕರೆದರೂ ಬಂದು ಜಾನುವಾರಗಳ ಆರೈಕೆ ಮಾಡುತ್ತಿದ್ದರು. ಅವರಿಗೆ ಪಶುಗಳೆಂದರೆ ಬಹಳ ಪ್ರೀತಿ ಅಷ್ಟೇ ಕಾಳಜಿಯಿಂದ ಆರೈಸುತ್ತಿದ್ದರು ಎಂದರು.

ಎಂ ಎಂ ಹೆಗಡೆಯವರ ಪತ್ನಿ  ಶಿಕ್ಷಕಿ ಲಕ್ಷ್ಮಿ ಹೆಗಡೆ, ಗ್ರಾ,ಪಂ ಸದಸ್ಯ ನಿತ್ಯಾನಂದ ಭಟ್ಟ, ಹಾಲು ಉತ್ಪಾದಕ ಸಂಘದ ಉಪಾಧ್ಯಕ್ಷ ಮಾಧವ ಕೋಟೆಮನೆ, ಮಹೇಶ ಹೆಬ್ಬಾರ, ಡೇರಿಯ ಸದಸ್ಯರು ಊರ ನಾಗರಿಕರು ಇದ್ದರು.

ಮುಖ್ಯಕಾರ್ಯ ನಿರ್ವಾಹಕರಾದ ದಾಮೋದರ ಹೆಬ್ಬಾರ ನಿರ್ವಹಿಸಿ ಸ್ವಾಗತಿಸಿ ವಂದಿಸಿದರು..

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0