ಬೇಟೆಗಾಗಿ ಬಂದಿದ್ದವರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

Dec 30, 2025 - 21:49
 0  71
ಬೇಟೆಗಾಗಿ ಬಂದಿದ್ದವರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಆಪ್ತ ನ್ಯೂಸ್‌ ಯಲ್ಲಾಪುರ:

ಯಲ್ಲಾಪುರ ತಾಲೂಕಿನ  ಮಂಚಿಕೇರಿ ವಲಯದ ಮಂಚಿಕೇರಿ ಸಮೀಪದ ಚಿಕ್ಕೊತ್ತಿ ಗ್ರಾಮದ ಅರಣ್ಯ ಸ.ಸಂಖ್ಯೆ.33 ರಲ್ಲಿ ಅನಧಿಕೃತವಾಗಿ ವನ್ಯಪ್ರಾಣಿಯನ್ನು ಹತ್ಯೆಮಾಡಲು ಬಂದಿದ್ದವರನ್ನು ಹೊಂಚು ಹಾಕಿ ಅರಣ್ಯ ಇಲಾಖೆಯವರು ಮಂಗಳವಾರ ಬಂಧಿಸಿದ್ದಾರೆ.
ಶಿರಸಿಯಿಂದ ಯಲ್ಲಾಪುರಕ್ಕೆ ಹೋಗುವ ಮಾರ್ಗದ ತೂಕದಬೈಲ ಹತ್ತಿರದಲ್ಲಿ ಅನುಮಾನಾಸ್ಪದವಾಗಿ ಮಾರುತಿ ಝನ್ ವಾಹನದಲ್ಲಿ ಬಂದೂಕು ಮತ್ತು ಇತರ ಆಯುಧಗಳೊಂದಿಗೆ ಬಂದಿದ್ದ ಆರೋಪಿತರಾದ ಹಸನ್ ಖಾನ್ ಇಬ್ರಾಹಿಂ ಖಾನ್ (ವಯಸ್ಸು:41 ವರ್ಷ)ಸೋಂದಾ ಕ್ರಾಸ್ ಶಿರಸಿ ತಾಲೂಕು,ಮುಜಿಬುರ್ ರೆಹಮಾನ್ ಅಬ್ದುಲ್ ಮುತಲಿದ್ ಸಾಬ್ (ವಯಸ್ಸು 40 ವರ್ಷ) ಸೋಂದಾ ಕ್ರಾಸ್ ಶಿರಸಿ, ಅಬ್ದುಲ ಜಬ್ಬಾರ ಹಬೀಬುರರೆಹಮಾನ ಸಾಬ,ಸೋದೆಪೇಟೆ (ವಯಸ್ಸು:22 ವರ್ಷ) ತಾ:ಶಿರಸಿ ಇವರನ್ನು ದಸ್ತಗಿರಿ ಮಾಡಲಾಗಿದೆ. ಇನ್ನೋರ್ವ ಪ್ರಮುಖ ಆರೋಪಿ  ಅಬ್ದುಲ್ ಹನ್ನನ್ ಮಹಮ್ಮದ್ ಸಾಬ್ ,ಹೆಗಡೆಕಟ್ಟಾ ಈತನು ತಲೆಮರೆಸಿಕೊಂಡಿದ್ದಾನೆ.  ಗುನ್ನೆಗೆ ಬಳಸಲು ತಂದಿದ್ದ ಬಿಳಿ ಬಣ್ಣದ ಮಾರುತಿ ಜನ್ ಕಾರು ಹಾಗೂ ಇತರ ಆಯುಧಗಳನ್ನು ಜಪ್ತ ಮಾಡಲಾಗಿದೆ. ಡಿಎಫ ಓ .ಹರ್ಷಭಾನು ಜಿ.ಪಿ ಅವರ ಮಾರ್ಗದರ್ಶನದಲ್ಲಿ ಮಂಚಿಕೇರಿ ಏಸಿಎಫ್ ಸಂಗಮೇಶ ಪ್ರಭಾಕರ ವಲಯಾರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ರವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಶ್ನೂರ್ ಅಹ್ಮದ್ ಅಬ್ದುಲ್ ಗಫಾರ್ .ಬೀರಪ್ಪ ಪಟಗಾರ,ಸಲ್ದಾಂ ಅಸ್ಟರ್, ಹಾಗೂ ಗಸ್ತು ಅರಣ್ಯ ಪಾಲಕರಾದ ಕೃಷ್ಣ ಎಡಗೆ, ಶಂಕರ, ವಿಶ್ವನಾಥ,ರಾಜಶೇಖರ ಹಾಗೂ ಗಸ್ತು ಅರಣ್ಯ ಪಾಲಕರು ಹಾಗೂ ಚಾಲಕ ಗಂಗಾಧರ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0