ಭಟ್ಕಳದಲ್ಲಿ ದಿ. ನ.೨೨ ರಂದು ಅರಣ್ಯವಾಸಿಗಳ  ಸಭೆ

Nov 20, 2025 - 21:25
 0  18
ಭಟ್ಕಳದಲ್ಲಿ ದಿ. ನ.೨೨ ರಂದು ಅರಣ್ಯವಾಸಿಗಳ  ಸಭೆ

ಆಪ್ತ ನ್ಯೂಸ್‌ ಭಟ್ಕಳ:

ಅರಣ್ಯವಾಸಿಗಳ ಕಾನೂನು ಜಾಗೃತೆಗೆ ಸಂಭಂದಿಸಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಕುರಿತು ಅರಣ್ಯವಾಸಿಗಳ ಗ್ರೀನ್ ಕಾರ್ಡ ಪ್ರಮುಖರೊಂದಿಗೆ ಚರ್ಚಿಸಲು ಭಟ್ಕಳ ತಾಲೂಕಿನ ಗ್ರೀನ ಕಾರ್ಡ ಪ್ರಮುಖರ ಸಭೆಯನ್ನು ಪ್ರವಾಸಿ ಮಂದಿರ ಹತ್ತಿರ ನ. ೨೨ ಮುಂಜಾನೆೆ ೯.೩೦ ಗಂಟೆಗೆ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅದ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
 ಧುರೀಣರು ಮತ್ತು ಗ್ರೀನ್ ಕಾರ್ಡ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿರಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹೊನ್ನಾವರದಲ್ಲಿ ಸಭೆ:
ಜಿಲ್ಲಾ ಮಟ್ಟದಲ್ಲಿ ಅರಣ್ಯವಾಸಿಗಳ ಕಾನೂನುಗಳ ಕುರಿತು ಜಾಗೃತೆ ಮೂಡಿಸುವ ಉದ್ದೇಶದಿಂದ ಹಮ್ಮಿಕೋಳ್ಳಲಾದ ಅರಣ್ಯವಾಸಿಗಳ ಸಭೆಯನ್ನು ಹೊನ್ನಾವರ ತಾಲೂಕಿನ ನಾಮದಾರಿ ಕಲ್ಯಾಣ ಮಂಟಪದಲ್ಲಿ ನ.೨೨, ಶನಿವಾರ, ಮದ್ಯಾಹ್ನ ೨.೩೦ ಸಂಘಟಿಸಲಾಗಿದೆ  ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಸಭೆಗೆ ಆಗಮಿಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಬೇಕಾಗಿ ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0