ಗಾಂಜಾ ಸೇವನೆ : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ನಾಲ್ಕು ಜನರ ಬಂಧನ

Nov 5, 2025 - 22:16
 0  70
ಗಾಂಜಾ ಸೇವನೆ : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ನಾಲ್ಕು ಜನರ ಬಂಧನ

ಆಪ್ತ ನ್ಯೂಸ್ ಶಿರಸಿ:

ಗಾಂಜಾ ಮಾದಕ ವಸ್ತು ಸೇವಿಸಿದ ಬಗ್ಗೆ ವೈಧ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಠಾಣೆ ಪೊಲೀಸರು ಇಂದು 2 ಪ್ರತ್ಯೇಕ ಪ್ರಕರಣ ದಾಖಲಿಸಿ ನಾಲ್ಕು ಜನರನ್ನು ಬಂಧಿಸಿದ ಘಟನೆ ಜರುಗಿದೆ.

ಶಿರಸಿಯ ಕೋರ್ಟ್ ರೋಡ್ ನಿವಾಸಿಯಾದ ಕಿಶನ್ ನಾರಾಯಣ ಹರಿಜನ, ಶಿರಸಿ ಬಾಪೂಜಿನಗರದ ನಿವಾಸಿಯಾದ ಮುತ್ತಣ್ಣ @ ಮುತ್ತು ತಂದೆ ಭೀಮಪ್ಪ ಭೋವಿ ಇವರುಗಳು ಶಿರಸಿ ಶಹರದ ಕ್ಯಾಪ್ಟನ್ ಕ್ಯಾಂಪಸ್ ಗೆ ಹೋಗುವ ಕಚ್ಚಾ ರಸ್ತೆಯಲ್ಲಿ ಸಿಕ್ಕವರಿಗೆ, ಹಾಗೂ ಶಿರಸಿ ನೆಹರೂನಗರದ ನಿವಾಸಿ ಮನೋಜ್ ರಾಮಾ ಮೇತ್ರಿ ಪ್ರಾಯ 22 ವರ್ಷ ಹಾಗೂ ಶಿರಸಿ ಐದು ರಸ್ತೆ ನಿವಾಸಿ ಸಮೀರ್ ತಂದೆ ಅಮೀನುದ್ದಿನ ಫಿರ್ಜದೆ, ಪ್ರಾಯ : 19 ವರ್ಷ ಇವರು ಶಿರಸಿ ಶಹರದ ಆನೆಹೊಂಡದ ಹತ್ತಿರ  ಗಾಂಜಾ ಅಮಲು ಪಧಾರ್ಥ ಸೇವನೆ ಮಾಡಿರುವ ಸಂಶಯದ ಮೇಲೆ ವಶಕ್ಕೆ ಪಡೆದು ನಗರದ ಪಂಡಿತ ಸಾರ್ವಜನಿ‌ಕ ಆಸ್ಪತ್ರೆಯಲ್ಲಿ ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದರಿಂದ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ  2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0