ರಾಷ್ಟ್ರದ ಗೌರವ ಅಮರವಾಗಬೇಕು ಎನ್ನುವುದು ಸಂಘದ ಉದ್ದೇಶ: ಗೋಪಾಲ ನಾಗರಕಟ್ಟೆ
ಆಪ್ತ ನ್ಯೂಸ್ ಶಿರಸಿ:
ಸಂಘದ ಹೆಸರು ಬೆಳೆಯಬೇಕು ಎಂಬ ಉದ್ದೇಶ ನಮ್ಮದಲ್ಲ. ರಾಷ್ಟ್ರದ ಗೌರವ ಅಮರವಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಹೇಳಿದರು.
ನಗರದ ವಿಕಾಸಾಶ್ರಮ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಸಂಘ ಶತಾಬ್ದಿ ನಿಮಿತ್ತ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಉಪಸ್ಥಿತಿ ವಹಿಸಿ ಮಾತನಾಡಿದರು.
ಜಾತಿಯಿಂದ ಯಾರೂ ದೊಡ್ಡವರಾಗುವುದಿಲ್ಲ. ತಾನು ಮಾಡುವ ಉತ್ತಮ ಕೆಲಸ ಕಾರ್ಯಗಳಿಂದ ಆತ ದೊಡ್ಡವನಾಗುತ್ತಾನೆ ಎಂದರು.
ನಮ್ಮ ರಾಷ್ಟ್ರದ ಪರಂಪರೆಯನ್ನು ಮಕ್ಕಳಿಗೆ ತಿಳಿಸಬೇಕು. ಮುಂದಿನ ಪೀಳಿಗೆ ನಿಜವಾದ ಹಿಂದೂವಾಗಿ ಬದುಕಬೇಕು. ಭಾರತ ಮಾತೆಯ ಹಿತಕ್ಕಾಗಿ ಬದುಕುವ ಜನರಿಗೆ ಅನ್ಯಾಯವಾಗದಂತೆ ಮಾಡಬೇಕು. ಪ್ರಕೃತಿಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಹಿಂದೂ ಹಿಂದುವಿಗಾಗಿ ಬದುಕಬೇಕು.ರಾಷ್ಟ್ರಕ್ಕಾಗಿ ಬದುಕಬೇಕು. ನನ್ನ ದೇಶದ ಘನತೆ ಗೌರವ ಹೆಚ್ಚಾಗಬೇಕು ಆ ನಿಟ್ಟಿನಲ್ಲಿ ನಾವು ಬದುಕಬೇಕು. ವಸುಧೈವ ಕುಟುಂಬಕಂ ಎಂಬ ಭಾವನೆ ಎಲ್ಲರಲ್ಲೂ ಬರಬೇಕು.

ಪ್ರಾಚಿನ ಪರಂಪರೆಯ ವಾರಸುದಾರನಾಗಿ ನಾವು ಬದುಕಬೇಕು. ಆಗ ಆಗ ಇಡೀ ಪ್ರಪಂಚವನ್ನು ಹೃದಯದಿಂದ ಗೆಲ್ಲಲು ಸಾಧ್ಯವಿದೆ ಎಂದರು.
ಸಂಘ ಕಳೆದ ನೂರು ವರ್ಷಗಳಲ್ಲಿ ಬಹಳ ಗಟ್ಟಿಯಾಗಿ ಬೆಳೆದು ನಿಂತಿದೆ. ದೇಶದ ಮೂಲೆ ಮೂಲೆಗಳಲ್ಲಿ ಸಂಘದ ಕಾರ್ಯಕ್ರಮಗಳು ನಡೆದಿದೆ. ಲಕ್ಷಕ್ಕೂ ಅಧಿಕ ತಾಣಗಳಲ್ಲಿ ಕಾರ್ಯಕ್ರಮ ನಡೆದಿದೆ. ದೇಶದೆಲ್ಲೆಡೆ ಸಂಚಲನ ಮೂಡಿಸಿದೆ.
ಪುಷ್ಪಾರ್ಚನೆ ಮಾಡುತ್ತಿರುವವರು ಇಂದು ಸಂಘದ ಗಣವೇಷ ದೊಂದಿಗೆ ಪಥಸಂಚಲನದಲ್ಲಿ ಭಾಗವಹಿಸಿ ಸಂಘದ ಸ್ವಯಂ ಸೇವಕರಾಗಿದ್ದಾರೆ ಎಂದರು.
ಮೂಲಭೂತ ನಂಬಿಕೆಯನ್ನು ಇಟ್ಟುಕೊಂಡು ಹೊರಡಲಾಯಿತು. ಇದು ಹಿಂದೂ ರಾಷ್ಟ್ರ. ರಾಷ್ಟ್ರದ ವಾರಸುದಾರನಾಗಿ ಕರ್ತವ್ಯ ನಿರ್ವಹಿಸಬೇಕು ತಾಯಿಗಾಗಿ ನಾವು ಕೆಲಸ ಮಾಡಬೇಕು ಎಂಬ ತತ್ವವನ್ನು ಇಟ್ಟುಕೊಂಡು ಸಂಘವನ್ನು ಆರಂಭಿಸಲಾಗಿದೆ. ಸಂಘವು ನಿರಂತರವಾಗಿ ಬೆಳೆಯುತ್ತಿದೆ. ರಾಷ್ಟ್ರಕ್ಕಾಗಿ ಬದುಕಬೇಕು ಎಂಬ ಭಾವ ಎಲ್ಲರಲ್ಲೂ ಮೂಡುತ್ತಿದೆ. ಜನರು ಅಪಹಾಸ್ಯ ಮಾಡಿದರೂ ಬೇಸರ ಮಾಡಿಕೊಳ್ಳದೇ ಜನರನ್ನು ಭೇಟಿ ಮಾಡಿ ನಾವೆಲ್ಲರೂ ಒಂದು ಎಂಬ ಭಾವವನ್ನು ಮೂಡಿಸಿ ಡಾ.ಹೆಗಡೆವಾರ್ ಸಂಘವನ್ನು ಕಟ್ಟಿಬೆಳೆಸಿದರು. ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶದಲ್ಲೂ ನಾವು ಸಂಘವನ್ನು ಪ್ರಾರಂಭಿಸಿದ್ದೇವೆ. ಜನರಲ್ಲಿ ಸಂಘದ ಮೇಲೆ ಪ್ರೀತಿ ಗೌರವ ಹೆಚ್ಚಾಯಿತು. ಗಾಂಧಿ ಹತ್ಯೆಯ ವಿಷಯವನ್ನು ವಿಟ್ಟುಕೊಂಡು ಸಂಘವನ್ನು ನಿಷೇಧಿಸಿದ್ದರು. ಆದರೂ ಸಹ ಶಾಂತರೀತಿಯಿಂದ ಸಂಘವನ್ನು ಮುಂದುವರೆಸಿಕೊಂಡು ಬರಲಾಯಿತು. ಪ್ರವಾಹ, ಭೂಕಂಪ ಸೇರಿದಂತೆ ದುಃಖಿತರಿಗೆ ನೆರವಾಗಿ ಸಂಘವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಇವೆಲ್ಲದರ ಪರಿಣಾಮವಾಗಿ ಜನರು ಸಂಘವನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದಾರೆ. ಉಪಹಾಸವನ್ನು, ವಿರೋಧ ವನ್ನೂ ಲೆಕ್ಕಿಸದೇ ಸಂಘ ಸಾಗರೋಪಾದಿಯಲ್ಲಿ ಬೆಳೆಯುತ್ತಿದೆ. ಭಾರತ ತನ್ನ ತಾಯಿ. ದೇಶದ ಕಣಕಣವೂ ಪವಿತ್ರವಾದದ್ದು . ಭಾರತದಲ್ಲಿ ಹುಟ್ಟಿದ ಪ್ರತಿಯೋಬ್ಬರು ನನ್ನವರು ಎಂಬ ಭಾವನೆಯನ್ನು ಸಂಘ ಮೂಡಿಸಿದೆ. ಸಮಾಜ ಇಂದು ಸಹಜವಾಗಿ ಸ್ಪಂದಿಸುತ್ತಿದೆ.
ನಾವೆಲ್ಲರೂ ಹಿಂದೂಗಳು ಎಂಬ ಭಾವವನ್ನು ಮೂಡಿಸುವಲ್ಲಿ ಸಂಘ ಯಶಸ್ವಿಯಾಗಿದೆ.ಸಮಾಜದಲ್ಲಿ ಹಿಂದೂ ಭಾವ ಬೆಳೆದಿದೆ. ಹಿಂದೂಗಳೆಲ್ಲ ಸಹೋದರರು. ಜಾತಿಗಳ ಬೇಧಭಾವ ಇಲ್ಲದ ಭಾವವನ್ನು ಬೆಳೆಸಿದೆ. ಹಿಂದೂ ಅಮರ ಪರಾಕ್ರಮಿ. ದುಷ್ಟರ ಬಲವನ್ನು ತಗ್ಗಿಸುವ ಪರಾಕ್ರಮಿ ಹಿಂದೂ. ಅಯೋಧ್ಯೆ ರಾಮಮಂದಿರವನ್ನು ನಿರ್ಮಾಣ ಮಾಡಲು ಯಶಸ್ವಿಯಾಗಿದ್ದೇವೆ. ಭಾರತದ ಸ್ವಾಭಿಮಾನದ ಪ್ರತೀಕವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಕೋಟಿ ಕೋಟಿ ಜನರ ಭಾವನೆ ರಾಮನ ರೂಪದಲ್ಲಿ ತೋರುತ್ತಿದೆ. ರಾಷ್ಟ್ರದ ಹಿತಕ್ಕಾಗಿ ಸಾಧು ಸಂತರು ಸೇರಿದಂತೆ ಸಾಕಷ್ಟು ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ರಾಮಚಂದ್ರ ಕಾಮತ್ , ಜಿಲ್ಲಾ ಸಂಘ ಚಾಲಕ ಶಂಕರನಾರಾಯಣ ಹೊಸಕೊಪ್ಪ ಹಾಗೂ ರಾಮಣ್ಣ ಇದ್ದರು.
ಮನ ಸೆಳೆದ ಪಥ ಸಂಚಲನ
ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಕರ್ಷಕ ಪಥ ಸಂಚಲನ ನಡೆಯಿತು. ನಗರದ ವಿಕಾಸ ಆಶ್ರಮ ಮೈದಾನದ ಬಳಿಯಿಂದ ಆರಂಭಗೊಂಡ ಪಥ ಸಂಚಲನ ಮಾರಿಕಾಂಬಾ ಹೈಸ್ಕೂಲ್, ಮಹಾಸತಿ ಸರ್ಕಲ್, ಭಗತ್‌ಸಿಂಗ್ ರಸ್ತೆ, ದೇವಿಕೆರೆ, ನಟರಾಜ ರಸ್ತೆ, ಬಸ್‌ಸ್ಟ್ಯಾಂಡ್ ಸರ್ಕಲ್, ಶಿವಾಜಿ ಚೌಕ, ಚನ್ನಪಟ್ಟಣ ಬಝಾರ್ ಮಾರ್ಗವಾಗಿ ದೇವಿಕೆರೆ, ಹೊಸಪೇಟೆ ರಸ್ತೆ ಮೂಲಕ ಅಶ್ವಿನಿ ಸರ್ಕಲ್ ಆಗಮಿಸಿ ವಿಕಾಸಾಶ್ರಮದಲ್ಲಿ ಕೊನೆಗೊಂಡಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



