ಹನುಮಂತಕೊಪ್ಪದ ನೂತನ ದೇವಾಲಯದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

Oct 2, 2025 - 19:21
 0  113
ಹನುಮಂತಕೊಪ್ಪದ ನೂತನ ದೇವಾಲಯದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

ಆಪ್ತ ನ್ಯೂಸ್ ಯಲ್ಲಾಪುರ:

ತಾಲೂಕಿನ ಹುತ್ಕಂಡ ಗ್ರಾಮದ ಹನುಮಂತಕೊಪ್ಪದ ನೂತನ ದೇವಾಲಯದ ಕಟ್ಟಡ ನಿರ್ಮಾಣಕ್ಕೆ ಗುರುವಾರ ವಿಜಯದಶಮಿಯಂದು ಭೂಮಿಪೂಜೆ ನಡೆಸಲಾಯಿತು.ಅಂದಾಜು ೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾ,ಗೊಳ್ಳಲಿರುವ ದೇವಸ್ಥಾನದ ಭೂಮಿ ಪೂಜೆಯನ್ನು  ಸಮಿತಿಯ ಅಧ್ಯಕ್ಷ ಹಿರಿಯ ನ್ಯಾಯವಾದಿ ನಾಗೇಶ ಭಾಗ್ವತ್ ಜೇನಮೂಲೆ ನೆರವೇರಿಸಿದರು.ಊರಿನ ಹಿರಿಯರಾದ ಕೃಷ್ಣ ಮರಾಠಿ,ತಿಮ್ನಣ್ಣ ಹೆಗಡೆ,ಅಪ್ಪು ಆಚಾರಿ, ಸುಬ್ರಾಯ ಭಟ್ ಕಂಚನಳ್ಳಿ ಪ್ರಮುಖರಾದ ನರಸಿಂಹ ಸಾತೊಡ್ಡಿ,ಗಜಾನನ ಹೆಗಡೆ,ಎಂ.ಎಸ್.ಹೆಗಡೆ ಜಂಬೆಸಾಲ,ನಾರಾಯಣ ಮರಾಠಿ, ನಾಗರಾಜ ಕುಂಟೆಜಡ್ಡಿ, ರಾಜೇಂದ್ರ ಮರಾಠಿ, ಗೋಪಾಲಕೃಷ್ಣ ಹಲಸಖಂಡ, ನೇತ್ರಾವತಿ ಭಾಗ್ವತ್, ಲಕ್ಷ್ಮಣ  ಗೋಳಿಗದ್ದೆ, ಅರ್ಚಕ  ವೆಂಕಟ್ರಮಣ ಗಾಳಿಜಡ್ಡಿ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0