೪೩ನೇ ವರ್ಷದ ಶಾರದಾ ಉತ್ಸವಕ್ಕೆ ಹರಿಪ್ರಕಾಶ್ ಕೋಣೆಮನೆ ಚಾಲನೆ

ಆಪ್ತ ನ್ಯೂಸ್ ಯಲ್ಲಾಪುರ:
ಇಂದಿನ ಜನಕ್ಕೆ ಬೇಕಾದ ಸಂಗತಿ ಮಾರ್ಗದರ್ಶನ ನೀಡುವ ವಿಶೇಷ ಮತ್ತು ರಚನಾತ್ಮಕ ಕಾರ್ಯಕ್ರಮದ ಮೂಲಕ ಇಲ್ಲಿ ಶಾರದಾ ಉತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದು ವಿಶ್ವದರ್ಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಕಳಚೆಯ ಲಕ್ಷ್ಮೀ ನರಸಿಂಹ ಯುವಕ ಸಂಘ, ಶಾರದಾ ಉತ್ಸವ ಸಮಿತಿ ಇವರ ಆಶ್ರಯದಲ್ಲಿ ಶಾರದಾ ಉತ್ಸವ-೪೩ ಕ್ಕೆ ಚಾಲನೆ ನೀಡಿ ಮಾತನಾಡಿದರು.
ಧಾರ್ಮಿಕದ ಜೊತೆಗೆ ಇಂತಹ ಉಪನ್ಯಾಸ ಮಾಲಿಕೆಗಳು ಅಗತ್ಯವಿದೆ ಎಂದು ಹೇಳಿದರು.ಸಂಸ್ಕೃತ ಪ್ರಾದ್ಯಾಪಕ ವಿ.ಮಹೇಶ ಭಟ್ ಇಡಗುಂದಿ ವ್ಯಕ್ತಿಯ ಬದುಕಿನಲ್ಲಿ ಧರ್ಮದ ಧರ್ಮದ ಆಚರಣೆ ಅಗತ್ಯತೆ ಕುರಿತು ಉಪನ್ಯಾಸ ನೀಡಿ ಋಷಿ ಮತ್ತು ಕೃಷಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು.ಧರ್ಮದ ಆಚರಣೆಯಲ್ಲಿ ತಪ್ಪು ಮಾಡದೇ ಧರ್ಮದ ಚೌಕಟ್ಟಿನಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.ಕೃಷಿಕ ಬಸವರಾಜ ನಡುವಿನಮನಿ ಮಾತನಾಡಿ ಯುವ ಜನಾಂಗ ಕೃಷಿಯಲ್ಲಿ ಉತ್ಸಾಹ ತೋರಬೇಕು.ಯಾಂತ್ರೀಕರಣವನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಮುನ್ನೆಡೆಯುವಂತೆ ತಿಳಿಸಿದರು.ಸಹಕಾರಿ ಸುಬ್ಬಣ್ಣ ಬೋಳ್ಮನೆ,ಸಂಕಲ್ಪ ಸಂಸ್ಥೆ ಸಂಚಾಲಕ ಪ್ರಸಾದ ಹೆಗಡೆ,ನ್ಯಾಯವಾದಿ ಜಿ.ಆರ್.ಹೆಗಡೆ, ಪತ್ರಕರ್ತ ನರಸಿಂಹ ಸಾತೊಡ್ಡಿ, ಗ್ರಾ.ಪಂ ಸದಸ್ಯೆ ವೀಣಾ ಗಾಂವ್ಕಾರ್ ಉಪಸ್ಥಿತರಿದ್ದು ಮಾತನಾಡಿದರು.ರಾಮಕೃಷ್ಣ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಗಾಂವ್ಕಾರ್ ವಂದಿಸಿದರು.
What's Your Reaction?






