ಹೂಡ್ಲಮನೆ ಮಂಜಣ್ಣನಿಗೆ ಜನಪದ ವೈದ್ಯ ಸಿರಿ ಪ್ರಶಸ್ತಿ
ಆಪ್ತ ನ್ಯೂಸ್ ಶಿರಸಿ:
ಉಡುಪಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಆರ್ಯುರ್ವೇದಿಕ್ ಕಾಲೇಜಿನ ವಾರ್ಷಿಕ ಸಮಾರಂಭದಲ್ಲಿ ಪಾರಂಪರಿಕ ವೈದ್ಯ ಮಂಜುನಾಥ ಹೆಗಡೆ ಹೂಡ್ಲಮನೆಯವರಿಗೆ ಅವರ ಜೀವಮಾನದ ಸಾರ್ಥಕ ಸೇವಾ ಮನೋಧರ್ಮವನ್ನು ಗುರುತಿಸಿ ಜನಪದ ವೈದ್ಯಸಿರಿ ಪ್ರಶಸ್ತಿ ಮತ್ತು 25 ಸಾವಿರ ರೂ ಮೊತ್ತ ಚಕ್ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ವನಸ್ಪತಿ ವೈದ್ಯ ಮಂಜಣ್ಣನವರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅನೇಕ ಕಾರ್ಯಕ್ರಮಗಳಲ್ಕಿ ಔಷಧಿ ಸಸ್ಯಗಳ ಕುರಿತ ಮಾಹಿತಿ ಕಾರ್ಯಾಗಾರ ನಡೆಸಿದ್ದರು.
ಇವರ ಸೇವಾ ಕೈಕಂರ್ಯವನ್ನು ಗಮನಿಸಿದ ಸಂಸ್ಥೆಯ ಅಧಿಕಾರಿಗಳು ಮಂಜಣ್ಣನವರ ಮನೆಗೆ ಆಗಮಿಸಿ ಔಷಧಿ ವನ, ದಾರುಕಾಷ್ಢ ಕೃತಿಗಳು, ಅವರು ರಚಿಸಿದ ಸಂಕಲನಗಳು ಇವುಗಳ ಕುರಿತಾಗಿ ಕ್ಷೇತ್ರ ವೀಕ್ಷಣೆ ನಡೆಸಿದ್ದರು.
ಉತ್ತರ ಕನ್ನಡದ ಬಹುಮುಖ ಪ್ರತಿಭೆಯೊಬ್ಬರಿಗೆ ದಕ್ಷಿಣ ಕನ್ನಡದಲ್ಲಿ ಪುರಸ್ಕರಿಸುತ್ತಿರುವುದು ಅಪರೂಪವೇ ಸರಿ. ಆ ಅವಕಾಶ ಹೂಡ್ಲಮನೆ ಮಂಜಣ್ಣನವರಿಗೆ ನಿಜಕ್ಕೂ ಅಭಿನಂದನೀಯವಾದುದಾಗಿದೆ. ಸಾವಿರ ವೈದ್ಯ ವಿದ್ಯಾರ್ಥಿಗಳು ಮತ್ತು ನೂರಕ್ಕೂ ಅಧಿಕ ಶಿಕ್ಷಕ ವೃಂದದವರು ಇರುವ ಸಭೆಯಲ್ಲಿ ಪಾರಂಪರಿಕ ವೈದ್ಯಕೀಯ ಮತ್ತು ಔಷಧಿ ಸಸ್ಯಗಳು ಮತ್ತದರ ಉಪಯೋಗ ಕುರಿತು ಸಂವಾದ ನಡೆಯಿತು. ಇದೇ ವರ್ಷ ಶಿರಸಿಯ ಸಾಹಿತ್ಯ ಸಿಂಚನ ಬಳಗದವರು ಮಂಜಣ್ಣನವರಿಗೆ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ನೀಡಿ ಗೌರವಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



