ಹೆಚ್ಚಿದ ಕಳ್ಳತನ: ಪೋಲೀಸರ ಕಾರ್ಯವೈಖರಿಗೆ ಎಂ ಕೆ ಭಟ್ಟ ಯಡಳ್ಳಿ ಕಿಡಿ

Oct 4, 2025 - 16:40
 0  113
ಹೆಚ್ಚಿದ ಕಳ್ಳತನ: ಪೋಲೀಸರ ಕಾರ್ಯವೈಖರಿಗೆ ಎಂ ಕೆ ಭಟ್ಟ ಯಡಳ್ಳಿ ಕಿಡಿ

ಆಪ್ತ ನ್ಯೂಸ್ ಯಲ್ಲಾಪುರ:
ತಾಲೂಕಿನಲ್ಲಿ ಹಗಲು ರಾತ್ರಿಯೆನ್ನದೆ ಕಳ್ಳತನ ನಡೆಯುತ್ತಿದ್ದು ಅತ್ಯಂತ ಭಯದ ವಾತಾವರಣ ಸೃಷ್ಠಿಮಾಡಿದೆ. ಪೋಲಿಸ್ ಇಲಾಖೆ ಯಾಕೆ ಕಳ್ಳರನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲ ಎಂದು ಗ್ರಾಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ ಕೆ ಭಟ್ಟ ಯಡಳ್ಳಿ ಪ್ರಶ್ನಿಸಿದ್ದಾರೆ.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನ್ನಾಡಿ,  ಪಟ್ಟಣ ಸೇರಿದಂತೆ ಮಂಚಿಕೇರಿ, ಕುಂದುರ್ಗಿ ಭಾಗಗಳಲ್ಲಿ ಹಗಲೇ ಕಳ್ಳತನ ನಡೆದಿದೆ. ರಾತ್ರಿಯ ವೇಳೆಯೂ ಕಳ್ಳತನ ನಡೆದಿದೆ. ಕಳ್ಳರ ಪತ್ತೆ ಮಾಡಬೇಕಾದ ಪೋಲಿಸರಿ ಯಾಕೆ ನಿಗಾ ವಹಿಸುತ್ತಿಲ್ಲ ಎನ್ನುವುದೇ  ಬೇಸರದ ಸಂಗತಿ. ಸಾರ್ವಜನಿಕರಾದ ನಾವು ಸಹಕಾರ ನೀಡಿದರೂ ಕಳ್ಳರ ಪತ್ತೆಗೆ ಹಿಮನದೇಟು ಹಾಕುತ್ತಿದ್ದಾರೆ.
 ಕಳ್ಳರಹಿಡಿಯದೇ ಇರುವುದರಿಂದ ಪೋಲೀಸ್  ಇಲಾಖೆಯ ಮೇಲಿನ ವಿಶ್ವಾಸ ಕಡಿಮೆ ಆಗುತ್ತದೆ ಎಂದು ದೂರಿದರು.ಒಕ್ಕೂಟದ ರಾಜ್ಯ ಸದಸ್ಯ ಗಣೇಶ ಹೆಗಡೆ ಹೆಮ್ನಾಡಿ
 ಮಾತನಾಡಿ, ಅಕ್ರಮ ಚಟುವಟಿಕೆ ಇಡೀ ತಾಲೂಕಿನಲ್ಲಿ ಹಗಲು ರಾತ್ರಿಯೆನ್ಬದೇ ಅವ್ಯಾಹತವಾಗಿ ನಡೆಯುತ್ತಿದೆ.ಗಾಂಜಾಸೇವನೆ ಮತ್ತು  ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.ಆಗೊಂದು‌ಈಗೊಂದು‌ ಗಾಂಜಾ ಪ್ರಕರಣ ದಾಖಲಾಗುತ್ತಿದೆ.
ಕಳ್ಳತನ ನಡೆದು ಮೂರ್ನಾಲ್ಕು ತಿಂಗಳು ಆದರೂ, ಕಳ್ಳರ ಪತ್ತೆ ಪ್ರಯತ್ನವನ್ನೂ ಮಾಡಿಲ್ಲ.ಬರುವ ೧೦ ದಿನಗಳಲ್ಲಿ ಕಳ್ಳರನ್ನು ಬಂಧಿಸದೇ ಇದ್ದಲ್ಲಿ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಹಿತ್ಳಲ್ಳಿ ಗ್ರಾ.ಪಂ ಅಧ್ಯಕ್ಷ  ಸತ್ಯನಾರಾಯಣ ಹೆಗಡೆ,ಪ್ರಮುಖರಾದ  ಕೆ.ಟಿ.ಹೆಗಡೆ, ಸದಾಶಿವ ಚಿಕ್ಕೋತ್ತಿ,ವಿಶ್ವೇಶ್ವರ ಏಕಾನ್
ಸುನಂದಾ ಮರಾಠಿ,ಪ್ರಕಾಶ ಶಾಪೂರಕರ್,ಲತಾ ಗೇರಗದ್ದೆ,ಅರುಣ ಭಟ್ ಉಮಚಗಿ,ಸುಬ್ಬಣ್ಣ ಉದ್ದಾಬೈಲ್  ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0