ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯವರಿಗೆ ಅಂತರ್ಜಿಲ್ಲಾಮಟ್ಟದ ಭಾಷಣಸ್ಪರ್ಧೆ

ಆಪ್ತ ನ್ಯೂಸ್ ಸಾಗರ:
ಕಾಂತಾರಯಜ್ಞ-ಕೊಪ್ಪಲು (ಕೆರೇಕೊಪ್ಪ), ಭಾರತಿಸಂಪದ-ವಡ್ಡಿನಗದ್ದೆ (ಸಿದ್ದಾಪುರ), ಪರಿಸರ ಜಾಗೃತಿ ಟ್ರಸ್ಟ್ (ರಿ) ಸೊರಬ, ಶ್ರೀ ವಿನಾಯಕ ಮೋಟಾರ್ಸ್ ಕುಂದಾಪುರ, ಕಲಾದ್ವಯ ಬೀ ನರ್ಸರಿ ತಲಕಾಲುಕೊಪ್ಪ ಮತ್ತು ಸಾಗರ ಸೈನ್ಸ್ ಫೋರಂ ಇವುಗಳ ಸಂಯುಕ್ತಾಶ್ರಯದಲ್ಲಿ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಸಂಬಂಧಿಸಿದ ಅಂತರ್ಜಿಲ್ಲಾಮಟ್ಟದ ಭಾಷಣಸ್ಪರ್ಧೆಯು ಡಿಸೇಂಬರ್ 6 ರ ಶನಿವಾರ ಸಾಗರದ HKH ಲೇಔಟಿನಲ್ಲಿಯ ಸಾಗರ ಸೈನ್ಸ್ ಸೆಂಟರ್ ನಲ್ಲಿ ನಡೆಯಲಿದೆ.
ಶರಾವತಿ ಪಂಪಡ್ ಸ್ಟೋರೇಜ್ ಯೋಜನೆಯ ಸಾಧಕಬಾಧಕಗಳು ಎನ್ನುವ ವಿಷಯದ ಬಗ್ಗೆ ನಡೆಯುವ ಈ ಸ್ಪರ್ಧೆಯ ಸಮಯ 9+1=10ನಿಮಿಷ ಆಗಿರುತ್ತದೆ. 20.11.2025ರ ಒಳಗಾಗಿ ಹೆಸರು ನೋಂದಾಯಿಸಬಹುದು. 18 ರಿಂದ 60 ವರ್ಷಗಳವರು ಭಾಗವಹಿಸಬಹುದು.
ಬಹುಮಾನ :
(1)ಪ್ರಥಮ ಸ್ಥಾನ: ರೂ.5,000/-+ಪ್ರಶಸ್ತಿಪತ್ರ+ಒಂದು ಔಷಧ ಗಿಡ
(2)ದ್ವಿತೀಯಸ್ಥಾನ: ರೂ.4,000/-+ಪ್ರಶಸ್ತಿಪತ್ರ+ಒಂದು ಔಷಧಗಿಡ
(3)ತೃತೀಯಸ್ಥಾನ: ರೂ.3,000/-+ಪ್ರಶಸ್ತಿಪತ್ರ+ಒಂದು ಔಷಧಗಿಡ
(4)ಚತುರ್ಥಸ್ಥಾನ: ರೂ.2,000/-+ಪ್ರಶಸ್ತಿಪತ್ರ+ಒಂದು ಔಷಧಗಿಡ
(5)ಪಂಚಮಸ್ಥಾನ: ರೂ.1,000/-+ಪ್ರಶಸ್ತಿಪತ್ರ+ಒಂದು ಔಷಧಗಿಡ
ಹೆಚ್ಚಿನ ಮಾಹಿತಿಗಾಗಿ :
9480136368, 8105861477 ಮತ್ತು 6363606114 ಈ ನಂಬರಗಳನ್ನು ಸಂಪರ್ಕಿಸಬಹುದಾಗಿದೆ.
What's Your Reaction?






